

ಹಾನಗಲ್ಲ: ಪೊಲೀಸ್ ದಾಳಿಯಿಂದ ಕಂಗೆಟ್ಟ ಮೊಬೈಲ್ ಕಳ್ಳರು ಕದ್ದ ಮಾಲು ಕೈಬಿಟ್ಟು ಪರಾರಿಯಾದ ಘಟನೆ ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ಇಬ್ಬರು ಯುವಕರು ಕದ್ದ ಮೊಬೈಲ್ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಬೇರೆಡೆ ಸಾಗಿಸಲು ತಾಲೂಕಿನ ಹುಲಗಿನಕೊಪ್ಪ ಗ್ರಾಮದ ಬಸ್ ನಿಲ್ದಾಣದ ಪಕ್ಕ ನಿಂತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಆಗ ಕಳ್ಳರು ಅಂದಾಜು 48,000 ರೂ. ಮೌಲ್ಯದ 15 ಸ್ಯಾಮ್ಂಗ್ ಕಂಪನಿಯ ಮೊಬೈಲ್ ಫೋನ್ಗಳಿದ್ದ ಚೀಲವನ್ನು ಬಿಟ್ಟು ಕಾಲ್ಕಿತ್ತಿದ್ದಾರೆ. ಆನಂದ ದೊಡ್ಡಮನಿ ಹಾಗೂ ಅಕ್ಷಯ ಮುದಗಲ್ಲ ಆರೋಪಿಗಳೆಂದು ಗುರುತಿಸಲಾಗಿದ್ದು, ಅವರ ವಿರುದ್ಧ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ.
ಸಿಪಿಐ ಶಿವಶಂಕರ ಗಣಾಚಾರಿ ಮಾರ್ಗದರ್ಶನದಲ್ಲಿ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿ ಕುಮಾರ ಹಿರೇಮಠ, ಹನುಮಂತ ಜಾನಗೇರಿ, ಕಿರಣಕುಮಾರ ಸಣ್ಣಗೌಡ್ರ, ಗುಡ್ಡಪ್ಪ ಗಂಟಿಸಿದ್ದಪ್ಪನವರ, ವೀರಣ್ಣ ಲಂಗೋಟಿ, ಚನ್ನವೀರಸ್ವಾಮಿ ಹಿರೇಮಠ ಇದ್ದರು.