More

    Web Exclusive: ಹಲವಾರು ಶಾಸಕ-ಸಚಿವರೇ ಮತದಾರರಲ್ಲ

    ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಾಳೆ * ಅರ್ಹತೆ ಇದ್ದ ಕೆಲವರೂ ನೋಂದಣಿಯಿಂದ ದೂರ

    ಹುಬ್ಬಳ್ಳಿ : ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಅ. 28ರಂದು ನಡೆಯಲಿದ್ದು, ಬಹಿರಂಗ ಪ್ರಚಾರದ ಭರಾಟೆ ಮುಕ್ತಾಯವಾಗಿದೆ. ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕ್ಷೇತ್ರದಲ್ಲಿ ವರು ಸಚಿವರನ್ನು ಒಳಗೊಂಡು 23 ಶಾಸಕರಿದ್ದಾರೆ. ಐವರು ವಿಧಾನ ಪರಿಷತ್ ಸದಸ್ಯರು, ಒಬ್ಬರು ಕೇಂದ್ರ ಸಚಿವರು ಸೇರಿದಂತೆ ನಾಲ್ವರು ಸಂಸದರಿದ್ದಾರೆ. ಇವರಲ್ಲಿ ಹೆಚ್ಚಿನವರು ಎಂಟು-ಹತ್ತು ದಿನಗಳಿಂದ ತಂತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಮತದಾರರನ್ನು ಸ್ವತಃ ಭೇಟಿಯಾಗಿ ಬೆಂಬಲ ಯಾಚಿಸಿದ್ದಾರೆ.

    ಎಲ್ಲ ಎಂಎಲ್​ಸಿಗಳೂ ಪ್ರಭುಗಳೇ

    ಕ್ಷೇತ್ರದ ಎಂಎಲ್​ಸಿಗಳೆಲ್ಲರೂ ಮತದಾರ ಪ್ರಭುಗಳೇ ಆಗಿದ್ದಾರೆ. ಹುಬ್ಬಳ್ಳಿ ವಾಸಿಗಳಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಉತ್ತರ ಕನ್ನಡ ಜಿಲ್ಲೆಯವರಾದ ಎಸ್.ಎಲ್. ಘೊಟ್ನೇಕರ, ಶಾಂತಾರಾಮ ಸಿದ್ಧಿ ಅವರು ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.

    ಗಮನಾರ್ಹ ಸಂಗತಿ ಎಂದರೆ, ಕ್ಷೇತ್ರ ವ್ಯಾಪ್ತಿಯ ಪ್ರಮುಖ ಜನಪ್ರತಿನಿಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಈ ಚುನಾವಣೆಯಲ್ಲಿ ಮತದಾರರೇ ಅಲ್ಲ! ಧಾರವಾಡ ಜಿಲ್ಲೆಯಲ್ಲಿ 7 ಶಾಸಕರಿದ್ದಾರೆ. ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ ಪದವೀಧರ ಕ್ಷೇತ್ರದ ಮತದಾರರು. ಉಳಿದ ಮೂವರು ಶಾಸಕರಿಗೆ ಮತಾಧಿಕಾರ ಇಲ್ಲ. ಗದಗ ಜಿಲ್ಲೆಯ ನಾಲ್ವರು ಶಾಸಕರಲ್ಲಿ ಎಚ್.ಕೆ. ಪಾಟೀಲರಿಗೆ ಮತ ಇದೆ. ಸಚಿವ ಸಿ.ಸಿ. ಪಾಟೀಲ ಮತ್ತು ಉಳಿದ ಶಾಸಕರು ಮತದಾನದ ಹಕ್ಕು ಹೊಂದಿಲ್ಲ.

    ಇದನ್ನೂ ಓದಿ: ಕೋವಿಡ್​-19ಗೆ ಸಂಭಾವ್ಯ ಚಿಕಿತ್ಸೆ; 25 ಸಾವಿರ ಡಾಲರ್​ ಗೆದ್ದ ಭಾರತೀಯ ಮೂಲದ ವಿದ್ಯಾರ್ಥಿನಿ

    ಅಧಿಕಾರಿಗಳ ನಿರಾಸಕ್ತಿ

    ಕ್ಷೇತ್ರದಲ್ಲಿ ಐಎಎಸ್, ಕೆಎಎಸ್ ಸೇರಿ ನೂರಾರು ಮಂದಿ ಉನ್ನತ ದರ್ಜೆಯ ಅಧಿಕಾರಿಗಳಿದ್ದಾರೆ. ಇವರಲ್ಲಿ ಕೆಲವರು ಇತ್ತೀಚೆಗೆ ವರ್ಗವಾಗಿ ಬಂದವರು. ಇತರ ಅನೇಕರು ವರ್ಷಾಂತರದಿಂದ ನಾಲ್ಕು ಜಿಲ್ಲೆ ವ್ಯಾಪ್ತಿಯೊಳಗೇ ಇದ್ದಾರೆ. ವಿಶೇಷವೆಂದರೆ, ಅರ್ಧಕ್ಕಿಂತ ಹೆಚ್ಚಿನ ಅಧಿಕಾರಿಗಳು ಪದವೀಧರ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿಲ್ಲ. ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೆಲ ಅಧಿಕಾರಿಗಳೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವುದನ್ನು ಮರೆತಿದ್ದಾರೆ.

    ಹಾವೇರಿ ಜಿಲ್ಲೆಯ ಆರು ಶಾಸಕರಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನೆಹರು ಓಲೆಕಾರ ಮತದಾನದ ಹಕ್ಕು ಹೊಂದಿದ್ದಾರೆ. ಸಚಿವ ಬಿ.ಸಿ. ಪಾಟೀಲ ಪದವೀಧರರಾದರೂ ನೋಂದಣಿಯನ್ನೇ ಮಾಡಿಕೊಂಡಿಲ್ಲ. ಉಳಿದ ಶಾಸಕರು ಮತದಾನಕ್ಕೆ ನೋಂದಣಿ ಮಾಡಿಕೊಳ್ಳಲು ಅರ್ಹರಲ್ಲ. ಉತ್ತರ ಕನ್ನಡ ಜಿಲ್ಲೆಯ 6 ಶಾಸಕರಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆರ ಮಾತ್ರ ಮತ ಹೊಂದಿದ್ದಾರೆ. ಸಚಿವ ಶಿವರಾಮ ಹೆಬ್ಬಾರ ಸೇರಿ ಉಳಿದ ನಾಲ್ವರು ಶಾಸಕರು 28ರ ಎಂಎಲ್​ಸಿ ಚುನಾವಣೆಯ ಮತದಾರರಲ್ಲ.

    ಇದನ್ನೂ ಓದಿ: ಮತದಾರರಿಗೆ ಹಣ ಹಂಚಿದ ಆರೋಪ: ಮುನಿರತ್ನ ವಿರುದ್ಧ ಬಿತ್ತು ಎಫ್​ಐಆರ್

    ಸಂಸದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹಾವೇರಿ-ಗದಗ ಕ್ಷೇತ್ರದ ಶಿವಕುಮಾರ ಉದಾಸಿ ಮತಾಧಿಕಾರ ಹೊಂದಿದ್ದಾರೆ. ಉತ್ತರ ಕನ್ನಡ ಕ್ಷೇತ್ರದ ಅನಂತಕುಮಾರ ಹೆಗಡೆ ಮತ ಹೊಂದಿಲ್ಲ. ಗದಗ ಜಿಲ್ಲೆ ನರಗುಂದ ಭಾಗವನ್ನು ಒಳಗೊಂಡ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಪಶ್ಚಿಮ ಪದವೀಧರ ಕ್ಷೇತ್ರ ವ್ಯಾಪ್ತಿಯ ನಿವಾಸಿಯಲ್ಲ.

    ಇದನ್ನೂ ಓದಿ: ರಾಜರಾಜೇಶ್ವರಿ ನಗರದಲ್ಲಿ ಸೆಟ್‌ಟಾಪ್ ‌ಬಾಕ್ಸ್​ ರಾಜಕೀಯ!

    ದಾಖಲೆಪತ್ರ ಹುಡುಕಬೇಕು
    ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಪದವಿ ಪ್ರಮಾಣಪತ್ರ ಅಥವಾ ಪದವಿ ಉತ್ತೀರ್ಣರಾಗಿರುವ ಅಂಕಪಟ್ಟಿ, ಇತರ ಚುನಾವಣಾ ಮತಪಟ್ಟಿಯಲ್ಲಿಯ ಹೆಸರು, ಆಧಾರ ಕಾರ್ಡ್/ಪಡಿತರ ಚೀಟಿ ಹೀಗೆ ದಾಖಲೆಪತ್ರಗಳು ಅಗತ್ಯ. ಈಗಾಗಲೇ ಸರ್ಕಾರಿ/ಖಾಸಗಿ/ಸ್ವಂತ ಉದ್ಯೋಗದಲ್ಲಿರುವ ಪದವೀಧರರನೇಕರಿಗೆ ಮನೆಯಲ್ಲಿ ಎಲ್ಲೋ ಇಟ್ಟಿರುವ ದಾಖಲೆಪತ್ರ ಹುಡುಕಿತಂದು ಝೆರಾಕ್ಸ್ ಮಾಡಿಸಿ ಸಲ್ಲಿಸುವುದೊಂದು ರಗಳೆ ಎನಿಸಿರಬಹುದು. ಇದೇ ಕಾರಣಕ್ಕೆ ಸರ್ಕಾರಿ ಅಧಿಕಾರಿಗಳು ಸೇರಿ ಅನೇಕರು ಈ ಚುನಾವಣೆಯಲ್ಲಿ ಮತ ನೋಂದಣಿ ಮಾಡಿಸಿಲ್ಲ ಎಂದು ರ್ತಸಲಾಗಿದೆ.

    ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್​ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts