More

    ರಾಜರಾಜೇಶ್ವರಿ ನಗರದಲ್ಲಿ ಸೆಟ್‌ಟಾಪ್ ‌ಬಾಕ್ಸ್​ ರಾಜಕೀಯ!

    ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೆಟ್‌ಟಾಪ್ ಬಾಕ್ಸ್ ರಾಜಕೀಯ ಆರಂಭವಾಗಿದೆ.
    ಬಿಜೆಪಿ ಅಭ್ಯರ್ಥಿ ಕ್ಷೇತ್ರದ ಮತದಾರರಿಗೆ ಸೆಟ್‌ಟಾಪ್ ಬಾಕ್ಸ್ ಹಂಚಿ, ಅದರ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ಗಂಭೀರ ಆರೋಪ. ಈ ಸಂಬಂಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದ ನಿಯೋಗ, ಸೆಟ್​ಟಾಪ್​ ಬಾಕ್ಸ್ ಪ್ರಚಾರದ ವಿಡಿಯೋ ದಾಖಲೆಯನ್ನೂ ಸಲ್ಲಿಸಿದೆ.

    ಇದೇ ವೇಳೆ ಮುನಿರತ್ನ ಅವರು ಅದು ನನ್ನ ವ್ಯವಹಾರ ಎಂದು ಹೇಳಿಕೆ ನೀಡಿದ್ದು, ಅದನ್ನೂ ಕಾಂಗ್ರೆಸ್ ಆಧಾರವಾಗಿ ಬಳಸಿಕೊಂಡು ಆಯೋಗದ ಮೇಲೆ ಒತ್ತಡ ತರಲಾರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೇ ವಿಚಾರದಲ್ಲಿ ಮಾತನಾಡಿದ್ದು, ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭಾವಚಿತ್ರ ಹಾಕಿ ಸೆಟ್‌ಟಾಪ್ ಬಾಕ್ಸ್ ಕೊಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸವಾಲು ಹಾಕಿದ್ದಾರೆ.

    ಇದು ನನ್ನ ಬ್ಯುಸಿನೆಸ್. ಹೀಗಾಗಿ, ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ. ಚುನಾವಣಾ ಆಯೋಗ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ. ಚುನಾವಣಾ ಅಖಾಡದಲ್ಲಿ ಒಕ್ಕಲಿಗ ಜಾತಿ ಕಾರ್ಡ್ ಬಳಸುತ್ತಿರುವ ಬಿಜೆಪಿ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲಿಯೂ ಒಕ್ಕಲಿಗ ಜಾತಿ ಕಾರ್ಡ್​ ಬಳಸಿಲ್ಲ. ಯಡಿಯೂರಪ್ಪ ಅವರು ಗೋಕಾಕ್‌ನಲ್ಲಿ ನೇರವಾಗಿ ವೀರಶೈವರು ಬಿಜೆಪಿಗೆ ಮತ ಹಾಕಿ ಎಂದು ಅವರು ಹೇಳಿದ್ದರಲ್ಲ. ನಾನು ಆ ರೀತಿ ನೇರವಾಗಿ ಎಲ್ಲೂ ಹೇಳಿಲ್ಲ. ಈಗ ಸದಾನಂದಗೌಡ, ಸಿ.ಟಿ. ರವಿ, ಅಶ್ವತ್ಥ ನಾರಾಯಣ, ಅಶೋಕ ಅವರೇ ಯಾಕೆ ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts