More

    ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸದ ಒಬ್ಬ ಸದಸ್ಯ

    ಯಲಬುರ್ಗಾ: ವಿಧಾನ ಪರಿಷತ್ ಚುನಾವಣೆಗೆ ತಾಲೂಕಿನಲ್ಲಿ 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಎಂಟು ಸೂಕ್ಷ್ಮ, 5 ಅತಿ ಸೂಕ್ಷ್ಮ ಹಾಗೂ 10 ಸಾಮಾನ್ಯ ಮತಗಟ್ಟೆಗಳಿದ್ದವು. ಮತಗಟ್ಟೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಕೋವಿಡ್ ಮಾರ್ಗಸೂಚಿಯಂತೆ ಮತದಾನಕ್ಕೆ ಅವಕಾಶ ನೀಡಲಾಯಿತು.

    22 ಗ್ರಾಪಂಗಳು, ಒಂದು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮತದಾರರು ಮತ ಚಲಾಯಿಸಿದರು. ಒಟ್ಟು 388 ಮತದಾರರ ಪೈಕಿ 387 ಜನರು ಮತ ಚಲಾಯಿಸಿದರು. ಚಿಕ್ಕಮ್ಯಾಗೇರಿ ಗ್ರಾಪಂ ಸದಸ್ಯೆ ಗಾಳೆವ್ವ ಈರಪ್ಪ ಮತಗಟ್ಟೆಗೆ ಆಗಮಿಸಿದಾಗ ಆರೋಗ್ಯದಲ್ಲಿ ಏರುಪೇರಾಗಿ ಮತ ಚಲಾಯಿಸಲಿಲ್ಲ. ಗಾಳೆವ್ವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು. ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಇದ್ದರೂ, ಬಹುತೇಕ ಗ್ರಾಪಂಗಳಲ್ಲಿ ಮಧ್ಯಾಹ್ನ 12ಕ್ಕೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವುದು ಕಂಡು ಬಂತು.

    ಮಧ್ಯಾಹ್ನ 4ರ ಬಳಿಕ ಮತಪೆಟ್ಟಿಗೆಗಳನ್ನು ತಹಸಿಲ್ ಕಚೇರಿಗೆ ತಂದು ಡಿಮಸ್ಟರಿಂಗ್ ಮಾಡಿದ ನಂತರ ರಾಯಚೂರಿಗೆ ತೆಗೆದುಕೊಂಡು ಹೋಗಲಾಯಿತು. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ಡಿ.14 ರಂದು ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts