ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕಾಶಿವಿಶ್ವೇಶ್ವರ ದೇವಸ್ಥಾನದ ಮರು ಪ್ರತಿಷ್ಠಾಪನೆಯ ಅಂಗವಾಗಿ 48 ದಿನಗಳ ಕಾಲ ಮಂಡಲಪೂಜೆ ಯಶಸ್ವಿಯಾಗಿದೆ. ಕೌಡ್ಲೆ ಹಾಗೂ ಅಕ್ಕಪಕ್ಕ ಗ್ರಾಮದ ಗ್ರಾಮಸ್ಥರು ಯಶಸ್ವಿಯಾಗಿ ಮಂಡಲ ಪೂಜೆಯ ಅಂತಿಮ ಘಟ್ಟಕ್ಕೆ ಬಂದಿದ್ದು ಜ.4 ರಂದು 48 ನೇ ದಿನದ ಅಂತಿಮ ಪೂಜಾ ಕೈಂಕರ್ಯಗಳನ್ನು ಪ್ರಧಾನ ಪುರೋಹಿತ್ ಅಜಿತ್ ನಿರಂಜನ್ ಅವರ ನೇತೃತ್ವದಲ್ಲಿ ನೆರೆವೇರಿಸಲಾಗುವುದು.
ಬೆಳಗ್ಗೆಯಿಂದಲೇ ಹೋಮ ಹವನ ಹಾಗೂ ಪೂಜಾ ಕೈಕರ್ಯಗಳು ನಡೆಯಲಿದ್ದು ಮದ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.