ಚಿಕ್ಕಬಳ್ಳಾಪುರ : ಚಳಿಗಾಲದ ಅಧಿವೇಶನದಲ್ಲೂ ವಕ್ಫ್ ಲ್ಯಾಂಡ್ ಜಿಹಾದ್ ಮತ್ತು ಬಡವರ ಪಡಿತರ ಚೀಟಿ ರದ್ದು, ಕನ್ನ ಭಾಗ್ಯದ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ಬೋರ್ಡ್ ಒಂದು ತಿಮಿಂಗಿಲ ಇದ್ದಂತೆ. ದೇವಸ್ಥಾನ, ಶಾಲೆ, ಕೃಷಿ ಜಮೀನುಗಳನ್ನು ಕಬಳಿಸುತ್ತಿದೆ. ಸಂವಿಧಾನದಲ್ಲಿ ಎಲ್ಲರೂ ಒಂದೇ ಎಂದು ಹೇಳಿದ್ದರೂ ವಕ್ಫ್ ಮಂಡಳಿಗೆ ವಾತ್ರ ಪ್ರತ್ಯೇಕ ಸಂವಿಧಾನವಿದೆ. ಬೌದ್ಧರು, ಕ್ರೈಸ್ತರಿಗೆ ಇಲ್ಲದ ನ್ಯಾಯಾಂಗದ ಅಧಿಕಾರ ವಕ್ಫ್ ಮಂಡಳಿಗಿದೆ. ಪ್ರತಿ ಸಂದರ್ಭದಲ್ಲೂ ಸಂವಿಧಾನದ ಆಶಯಗಳ ಬಗ್ಗೆ ದೊಡ್ಡದೊಡ್ಡ ಮಾತನಾಡುವ ಕಾಂಗ್ರೆಸ್, ಇದರಲ್ಲಿನ ಪಕ್ಷಪಾತದ ಬಗ್ಗೆ ಮಾತ್ರ ಚಕಾರ ಎತ್ತುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕಂದವಾರದಲ್ಲಿನ ಸರ್ಕಾರಿ ಶಾಲೆ ಆವರಣವನ್ನು ವಕ್ಫ್ ಕಬಳಿಸಿದೆ. ರಾಷ್ಟ್ರಧ್ವಜ ಇರಬೇಕಾದ ಸ್ಥಳದಲ್ಲಿ ಹಸಿರು ಬಾವುಟ ಹಾರಿಸಲಾಗಿದೆ. ಅಲ್ಲಿನ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ವಾಡಿದರೆ, ಶಾಲಾ ಮಕ್ಕಳು ಯಾವ ಪ್ರಾರ್ಥನೆ ವಾಡಬೇಕು ಎಂದು ಪ್ರಶ್ನಿಸಿದರು.
ವಕ್ಫ್ ಮೂಲಕ ಹಿಂದುಗಳ ಜಮೀನುಗಳನ್ನು ಕಬಳಿಸುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಲ್ಲಿ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಈಗಾಗಲೇ ಬಿಜೆಪಿಯ ಹೋರಾಟಕ್ಕೆ ಹೆದರಿ, ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲಾಗುತ್ತಿದೆ. ಆದರೂ ಲ್ಯಾಂಡ್ ಜಿಹಾದ್ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು ಅರಿವು ಮೂಡಿಸಲಾಗುತ್ತಿದೆ ಎಂದರು.
ಕನ್ನ ಭಾಗ್ಯ ಗ್ಯಾರಂಟಿ ನಿಲ್ಲಿಸಿ
ಎಲ್ಲರಿಗೂ ಉಚಿತ ಎಂದು ಹೇಳಿ ಗ್ಯಾರಂಟಿ ಯೋಜನೆಗಳನ್ನು ೋಷಿಸಿದ ಸರ್ಕಾರ ಬಡವರ ರೇಷನ್ ಕಾರ್ಡ್‌ಗಳನ್ನು ರದ್ದುಪಡಿಸುತ್ತಿದೆ. ಇದರಲ್ಲಿ ಈಗಾಗಲೇ 12 ಲಕ್ಷ ರೇಷನ್ ಕಾರ್ಡ್ ರದ್ದು ಗುರಿ ಸಾಧನೆಯಾಗಿದೆ. ಈಗಾಗಲೇ ಉಚಿತ ಯೋಜನೆಗಳಿಗೆ ಖಜಾನೆ ಖಾಲಿಯಾಗಿದ್ದು ಶಾಸಕರು ದಂಗೆ ಏಳುತ್ತಿದ್ದಾರೆ. ಇದಕ್ಕೆ ಹಣ ಉಳಿಸಲು ರೇಷನ್‌ಕಾರ್ಡ್ ರದ್ದುಗೊಳಿಸುವುದರಲ್ಲಿ ಉತ್ಸುಕತೆ ತೋರುತ್ತಿದೆ. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳುವುದೆಲ್ಲ ಸುಳ್ಳಾಗುತ್ತಿದೆ. ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದು, ಕೂಡಲೇ ಕಾರ್ಡು ರದ್ದು ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಹಾಗೆಯೇ ಲಂಚ ಪಡೆದು ಅನರ್ಹರಿಗೆ ಕಾರ್ಡು ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಜೈಲಿಗೆ ಹಾಕಬೇಕು ಎಂದು ಅಶೋಕ್ ಆಗ್ರಹಿಸಿದರು.
ವಕ್ಫ್ ಬೋರ್ಡ್ ರದ್ದು
ಪ್ರಧಾನಿ ನರೇಂದ್ರ ಮೋದಿ ಅವರು ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿದ್ದು, ವಕ್ಫ್ ಬೋರ್ಡ್ ಹೋಗುತ್ತದೆ ಎಂದು ಅಶೋಕ್ ಮಾಹಿತಿ ನೀಡಿದರು.
ಈಗಾಗಲೇ ಧಾರ್ಮಿಕ ಕಾಯ್ದೆಗಳ ತಿದ್ದುಪಡಿ ಬಗ್ಗೆ ಚರ್ಚೆಯಾಗುತ್ತಿದೆ. ವಕ್ಫ್ ಬೋರ್ಡ್ ವಿಚಾರವಾಗಿ ಸಮಿತಿ ರಚಿಸಿದ್ದು, ತಿಮಿಂಗಲ ಬೋರ್ಡ್ ರದ್ದು ಮಾಡಲು ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ 21,000 ಆಸ್ತಿಗಳನ್ನು ತನ್ನದು ಎಂದು ವಕ್ಫ್ ಬೋರ್ಡ್ ೋಷಿಸಿದೆ. 1994ರಲ್ಲಿ ಕಾಂಗ್ರೆಸ್ ಸರ್ಕಾರವು ಮಂಡಳಿಗೆ ನೀಡಿದ ಪರಮಾಧಿಕಾರದ ಅಧಿಸೂಚನೆಯನ್ನು ರದ್ದುಪಡಿಸಬೇಕಾಗಿದೆ. ಇದರ ಭಯದಿಂದಲೇ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ತ್ವರಿತವಾಗಿ ಜಾಗಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ವಕ್ಫ್ ಹೆಸರು ಸೇರಿಸಲಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಸಚಿವ ಜಮೀರ್ ಅಹಮದ್ ಅವರ ಕುಮ್ಮಕ್ಕಿನಿಂದ ಜಾಗ ಕಬಳಿಸಲಾಗುತ್ತಿದೆ ಎಂದು ಆರೋಪಿಸಿದರು.
ನೆಹರು ಮಾತಿಗೆ ಗೌರವವಿಲ್ಲ
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪರಿಭಾವಿತ ಅರಣ್ಯ ಪ್ರದೇಶ ಅಧಿಸೂಚನೆಗೆ ಸಂಬಂಧಿಸಿದಂತೆ ನಿಯಮಾನುಸಾರ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಆದರೆ, ಈಗ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಗೊಂದಲ ಮೂಡಿಸುತ್ತಿದ್ದಾರೆ ಎಂದು ಅಶೋಕ್ ಕಿಡಿಕಾರಿದರು.
ಹಿಂದೆ ಕಂದಾಯ ಸಚಿವನಾಗಿದ್ದಾಗ ಬಡಜನರ ಹಾಡಿಗಳಿಗೆ ಹೋಗಿ ರೈತರ ಜಮೀನು ಕಾಪಾಡಿದ್ದು ಇಲಾಖೆಯಲ್ಲಿ ಕ್ರಾಂತಿಕಾರಿ ಕೆಲಸಗಳನ್ನು ನಿರ್ವಹಿಸಲಾಗಿತ್ತು. ಪ್ರಧಾನಿ ಜವಾಹರಲಾಲ್ ನೆಹರೂ ಎಚ್‌ಎಂಟಿಗೆ ನೀಡಿದ್ದ ಜಾಗವನ್ನು ಹಾಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯಭೂಮಿ ಎನ್ನುತ್ತಿದ್ದಾರೆ. ಅವರ ಪ್ರಧಾನಿ ಮಾತಿಗೂ ಗೌರವ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು.