

ಹುಬ್ಬಳ್ಳಿ: ತಾಲೂಕಿನ ಅಗಡಿ ಕ್ರಾಸ್ ಬಳಿ ಇಸ್ಟೀಟ್ ಆಟವಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರಿಬ್ಬರ ಮೇಲೆ ಹಲ್ಲೆಯಾದ ಘಟನೆ ನಡೆದಿದೆ.
20ಕ್ಕೂ ಹೆಚ್ಚು ಜನರು ಇಸ್ಪೀಟ್ ಆಟವಾಡುತ್ತಿದ್ದರು. ಮಾಹಿತಿ ತಿಳಿದು ತಿಮ್ಮಣ್ಣ ಬಂಡಿವಡ್ಡರ ಹಾಗೂ ಮಹಾಂತೇಶ ಮದ್ದೀನ ಎಂಬ ಪೊಲೀಸರು ದಾಳಿ ನಡೆಸಿದ್ದರು.
ಇಸ್ಪೀಟ್ ಆಡುತ್ತಿದ್ದವರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.