ಅಪಘಾತದಲ್ಲಿ ಚಾಲಕ ಸಾವು

ಅಪಘಾತದಲ್ಲಿ ಚಾಲಕ ಸಾವು
Published on

ಹನೂರು: ತಾಲೂಕಿನ ಗಡಿ ಗರಿಕೆಕಂಡಿ ಮೂಲಕ ತಮಿಳುನಾಡಿನ ಬರಗೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಶುಕ್ರವಾರ ರಾತ್ರಿ ಈಚರ್ ವಾಹನ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈಚರ್ ವಾಹನದ ಚಾಲಕ ಮೃತಪಟ್ಟಿದ್ದು, ಲಾರಿ ಚಾಲಕ ತೀವ್ರಗಾಯಗೊಂಡಿದ್ದಾನೆ.

ಹನೂರಿನ ಈಚರ್ ವಾಹನದ ಚಾಲಕ ಶಿವು (27) ಮೃತ ದುರ್ದೈವಿ. ಶುಕ್ರವಾರ ರಾತ್ರಿ 9ರ ವೇಳೆಯಲ್ಲಿ ಹನೂರಿನಿಂದ ತಮಿಳುನಾಡಿನ ಈರೋಡ್‌ಗೆ ಈಚರ್ ವಾಹನದಲ್ಲಿ ಟೊಮ್ಯಾಟೊ ತುಂಬಿಕೊಂಡು ತೆರಳುತ್ತಿದ್ದ ವೇಳೆ ಗರಿಕೆಕಂಡಿ-ಬರಗೂರು ಮಾರ್ಗದ ತಿರುವಿನಲ್ಲಿ ಹನೂರಿನ ಕಡೆ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ರಭಸಕ್ಕೆ ಲಾರಿ ಸುಮಾರು 20 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಚಾರಿ ಚಾಲಕ ಬರಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ತಮಿಳುನಾಡಿನ ಬರಗೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಬರಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ. ಈ ಸಂಬಂಧ ಬರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net