ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿ ತೆರವು

btw_school Room
Published on

ಬಂಟ್ವಾಳ: ಬಾಳ್ತಿಲ ಗ್ರಾಮದ ಕಂಠಿಕ ಕಿರಿಯ ಶಾಲೆಯ ಶಿಥಿಲಾವಸ್ಥೆಯ 3 ಕೊಠಡಿಗಳನ್ನು ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ವಿಪತ್ತು ನಿರ್ವಹಣಾ ತಂಡ ಶ್ರಮದಾನದ ಮೂಲಕ ತೆರವು ಮಾಡಿದೆ.

ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಶಾಲಾ ಮುಖ್ಯಶಿಕ್ಷಕಿ ಹಾಗೂ ಎಸ್‌ಡಿಎಂಸಿಯವರ ಮನವಿ ಮೇರೆಗೆ ಈ ಕಾರ್ಯಕ್ರಮ ನಡೆಸಲಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರಮೇಶ್ ಹಾಗೂ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಶ್ರಮದಾನದ ಸಂದರ್ಭ ಭೇಟಿ ನೀಡಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.

ಶ್ರಮದಾನದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ತಂಡದ ಸಂಯೋಜಕಿ ವಿದ್ಯಾ, ಶೌರ್ಯ ತಂಡದ ಸದಸ್ಯರುಗಳಾದ, ಗಣೇಶ್, ರವಿಚಂದ್ರ, ಧನಂಜಯ, ಚಿನ್ನಾ, ಸೌಮ್ಯ, ವಿದ್ಯಾ, ಮೌರೀಶ್, ರಮೇಶ್, ವೆಂಕಪ್ಪ, ಸಂತೋಷ್, ಸತೀಶ್, ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಚೇತನಾ ಕುಮಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್, ಸದಸ್ಯರುಗಳಾದ ಸೌಮ್ಯ, ರಾಜೇಶ್, ಶಾರದಾ, ದೇವಕಿ, ರಘು, ಶಶಿ, ಭವಾನಿ, ಮೋಹಿನಿ, ಹಿರಿಯ ವಿದ್ಯಾರ್ಥಿಗಳಾದ ರೋಹಿತ್, ಅಕ್ಷತ್, ಚಂದ್ರಶೇಖರ್, ಸುರೇಶ್, ಸತೀಶ್, ಶಿಕ್ಷಕಿರಾದ ಮೋನಿಷ, ಬಬಿತಾ, ಅಡುಗೆ ಸಿಬ್ಬಂದಿ ಭವಾನಿ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net