

ಬಾಗಲಕೋಟೆ: ಭಾರತದ ಗ್ರಾಮೀಣ ಪರಿಸರ ಯುವ ಸಮುದಾಯವು ತಮ್ಮ ಬದುಕಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಬೆಳಸಿಕೊಳ್ಳಬೇಕು. ಸೇವಾ ಮನೋಭಾವದಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿಗಿಕೇರಿ ಗ್ರಾ.ಪಂ ವ್ಯಾಪ್ತಿಯ ಕದಾಂಪುರ ಆರ್.ಸಿ. ಗ್ರಾಮದಲ್ಲಿ ಈಚೆಗೆ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2022-23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಎಸ್.ಎಸ್ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುವದರಿಂದ ಶಿಬಿರಾರ್ಥಿಗಳಲ್ಲಿ ಹಳ್ಳಿಯ ಜನರ ಸಂಸ್ಕೃತಿ, ಪರಂಪರೆ ತಿಳಿದುಕೊಂಡು ಗ್ರಾಮ ಸೇವೆಯ ಮಾಡುವ ಮನೋಭಾವ ಬೆಳಿಸಿಕೊಳ್ಳಲು ಪೂರಕವಾಗುತ್ತದೆ ಎಂದರು.
ಶಿಗಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ನಾಯ್ಕ ಮಾತನಾಡಿ, ಎನ್.ಎಸ್.ಎಸ್.ಶಿಬಿರದಿಂದ ಗ್ರಾಮಗಳಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ದಿಟ್ಟತನದಿಂದ ಸತ್ಯ ಬರೆಯಯಿರಿ
ಕಾಲೇಜಿನ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿ, ಶಿಬಿರಾರ್ಥಿಗಳು ತಮ್ಮ ವ್ಯಕ್ತಿತ್ವದಲ್ಲಿ ಶಿಸ್ತು, ನಂಬಿಕೆ, ವಿಶ್ವಾಸದಿಂದ ಕಾರ್ಯ ಮಾಡುವ ಮೂಲಕ ಆದರ್ಶ ವ್ಯಕ್ತಿಗಳಾಗಬೇಕು, ಗ್ರಾಮೀಣ ಪರಿಸರದಲ್ಲಿ ನಮ್ಮ ಸರ್ಕಾರಿ ಕಾಲೇಜಿನ ಕೀರ್ತಿ ಬೆಳಗಿಸುವ ಕೆಲಸವನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಗಿಕೇರಿ ಗ್ರಾ.ಪಂ ಉಪಧ್ಯಾಕ್ಷೆ ಭೀಮವ್ವ ದೊಡ್ಡಮನಿ, ಗ್ರಂಥಾಲಯಗಳ ಜಿಲ್ಲಾಧ್ಯಕ್ಷ ಎನ್.ಟಿ. ಲಮಾಣಿ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಭಾಸ್ಕರ ಮುಂಡೆವಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ಎಸ್.ಇಂಜಗನೇರಿ ಉಪಸ್ಥಿತರಿದ್ದರು. ಪಾರ್ವತಿ ನಾಯಕ ಪ್ರಾರ್ಥನೆ ಮಾಡಿದರು, ಸುಶ್ಮೀತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ.ನಾಗಮ್ಮಾ ಸ್ವಾಗತಿಸಿದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.