More

    ದಿಟ್ಟತನದಿಂದ ಸತ್ಯ ಬರೆಯಯಿರಿ

    ಜಮಖಂಡಿ : ಸಾಮಾಜಿಕ ಸ್ವಾಸ್ಥೃ ಕಾಪಾಡುವ ನಿಟ್ಟಿನಲ್ಲಿ ಸತ್ಯವನ್ನು ದಿಟ್ಟತನದಿಂದ ಪತ್ರಿಕೆಗಳಲ್ಲಿ ಬರೆಯಬೇಕೆಂದು ಶಾಸಕ, ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಮಖಂಡಿ ಘಟಕದ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗದ ಜತೆಗೆ ಪತ್ರಿಕಾ ಮಾಧ್ಯಮವನ್ನು ನಾಲ್ಕನೇ ಅಂಗವಾಗಿ ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪತ್ರಕರ್ತರ ಪಾತ್ರ ದೊಡ್ಡದಾಗಿದೆ ಎಂದರು.

    ಇದನ್ನೂ ಓದಿ: ಆಲಮಟ್ಟಿ ಜಲಾಶಯದ ನೀರು ಹರಿಸಲು ಆದೇಶ

    ಡಿವೈಎಎಸ್‌ಪಿ ಶಾಂತವೀರ ಈ. ಮಾತನಾಡಿ, ಪತ್ರಿಕಾರಂಗ ಶ್ರಮವಹಿಸಿ ಜವಾಬ್ದಾರಿಯಿಂದ ಕೆಲಸ ಮಾಡದಿದ್ದರೆ ಅನ್ಯಾಯ, ಅಧರ್ಮ, ಶೋಷಣೆ ನಿಲ್ಲಿಸಲು ಸಾಧ್ಯವಿಲ್ಲ. ಸರ್ಕಾರದ ಕಿವಿ ಹಿಂಡುವ ಹಾಗೂ ಸಮಾಜ ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ನಿರಂತರ ಮಾಡಬೇಕು ಎಂದರು.

    ಮಹಾಲಿಂಗಪುರ ಪತ್ರಕರ್ತ ಶಿವಲಿಂಗ ಸಿದ್ನಾಳ ವಿಶೇಷ ಉಪನ್ಯಾಸ ನೀಡಿ, ಸೈನಿಕರ ಗನ್, ಪತ್ರಕರ್ತರ ಪೆನ್ ಹಾಗೂ ರೈತರ ಬೆನ್ನು ಯಾವಾಗಲೂ ಸನ್ನದ್ಧ ಸ್ಥಿತಿಯಲ್ಲಿರಬೇಕು. ಪತ್ರಕರ್ತರು ಪೆನ್ನನ್ನು ಅಸವನ್ನಾಗಿ ಬಳಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕು ಎಂದರು.

    ಕಾನಿಪ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದಲಭಂಜನ್ ಮಾತನಾಡಿದರು. ಕಾನಿಪ ಸಂಘದ ಜಮಖಂಡಿ ಘಟಕದ ಅಧ್ಯಕ್ಷ ಅಪ್ಪು ಪೋತರಾಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಇದನ್ನೂ ಓದಿ: ಸೌಹಾರ್ದದಿಂದ ಮೊಹರಂ ಆಚರಿಸಿ

    ಪತ್ರಕರ್ತ ಮೋಹನ ಸಾವಂತ ಅವರಿಗೆ ದಿ. ಬಾಬುರಡ್ಡಿ ತುಂಗಳ ಸ್ಮರಣಾರ್ಥ ಕೊಡಮಾಡುವ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಪತ್ರಕರ್ತರ ಪ್ರತಿಭಾವಂತ ಮಕ್ಕಳಾದ ತುಪೇಲಅಹ್ಮದ್ ಕೊರತಿ, ತಾಹೀರ್‌ಹುಸೇನ್ ಕೊರತಿ, ತನ್ವೀರಅಹ್ಮದ್ ಕೊರತಿ, ಪ್ರಣವ ಲಕ್ಷ್ಮೀಕಾಂತ ದುದಗಿ ಅವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಪತ್ರಿಕಾ ವಿತರಕರಾದ ರವಿ ಶೇಗಾಂವಿ, ರಮೇಶ ಮಾಂಗ, ಪವನ ಗೌಡರ, ವಿಜಯ ಮೈಗೂರ ಅವರನ್ನು ಸನ್ಮಾನಿಸಲಾಯಿತು.

    ಆರೋಗ್ಯ ಉಚಿತ ತಪಾಸಣೆ ಶಿಬಿರ ಹಾಗೂ ಉಚಿತ ಹಣ್ಣಿನ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.
    ಕಾನಿಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ, ಡಾ. ವಿಜಯಲಕ್ಷ್ಮೀ ತುಂಗಳ ಇದ್ದರು.

    ಇದನ್ನೂ ಓದಿ: ಕೃಷ್ಣೆಗೆ ಹರಿದು ಬಂದ ಅಪಾರ ನೀರು

    ರಕ್ಷಿತಾ ಕರಡಿ ಪ್ರಾರ್ಥಿಸಿದರು. ಸಂಘದ ಗೌರವಾಧ್ಯಕ್ಷ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಕಾನಿಪ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಮಲ್ಲಿಕಾರ್ಜುನ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ಸಂಘದ ಖಜಾಂಚಿ ಶಿವಾನಂದ ಕೊಣ್ಣೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts