More

    ಆಲಮಟ್ಟಿ ಜಲಾಶಯದ ನೀರು ಹರಿಸಲು ಆದೇಶ

    ಆಲಮಟ್ಟಿ: ಲಾಲ್‌ಬಹಾದೂರ್ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ನಿರಂತರ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಜಲಾಶಯದ ಮಟ್ಟ ಏರುಗತಿಯಲ್ಲಿ ಸಾಗಿದೆ.

    ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಭಾನುವಾರ ಸಂಜೆ ಒಳಹರಿವಿನ ಪ್ರಮಾಣ 1,16,648 ಕ್ಯೂಸೆಕ್ ಇದ್ದರೆ, 6000 ಕ್ಯೂಸೆಕ್ ನೀರನ್ನು ಜಲಾಶಯ ಬಲಭಾಗದ ವಿದ್ಯುತ್ ಘಟಕ ಮೂಲಕ ನದಿಪಾತ್ರಕ್ಕೆ ಹರಿಸಲಾಗುತ್ತಿದೆ.

    ಕುಡಿವ ಉದ್ದೇಶಕ್ಕೆ ನೀರು ಬಿಡುಗಡೆ: ಕುಡಿವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಜಲಾಶಯದಿಂದ 4.50 ಟಿಎಂಸಿ ನೀರನ್ನು ಹರಿಸುವಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದರಿಂದ ಆಲಮಟ್ಟಿ ಜಲಾಶಯದಿಂದ ಶುಕ್ರವಾರದಿಂದ ನೀರು ಹರಿಸಲಾಗುತ್ತಿದೆ.

    ಜನ-ಜಾನುವಾರುಗಳಿಗೆ ಕುಡಿವ ಉದ್ದೇಶಕ್ಕಾಗಿ ವಿಜಯಪುರ ಜಿಲ್ಲೆಯ ಚಿಮ್ಮಲಗಿ ಪಶ್ಚಿಮ ಕಾಲುವೆ ಮೂಲಕ ಕೆರೆಗಳನ್ನು ತುಂಬಿಸಲು 0.304 ಟಿಎಂಸಿ ಒಳಗೊಂಡಂತೆ ವಿವಿಧ ಯೋಜನೆಗಳ ಕಾಲುವೆ ಮೂಲಕ ಜಿಲ್ಲೆಯ ಕೆರೆಗಳನ್ನು ಹಾಗೂ ಎನ್‌ಟಿಪಿಸಿ ಸ್ಥಾವರದ ಕೆರೆ ತುಂಬಿಸಲು 2.50 ಟಿಎಂಸಿ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ನಾರಾಯಪುರ ಜಲಾಶಯಕ್ಕೆ ಎಂಡಿಡಿಎಲ್ ಮಟ್ಟಕ್ಕೆ ನೀರು ಭರ್ತಿಯಾದ ನಂತರ 0.925 ಟಿಎಂಸಿ ನೀರನ್ನು ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ಇಂಡಿ ನಾಲಾ ಕಾಲುವೆ ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ಎಂವಿಎಸ್‌ಗಳ ಸಂಗ್ರಹಾಲಯಗಳಿಗೆ ಅಗತ್ಯವಿರುವ 2 ಟಿಎಂಸಿ ನೀರು ಸೇರಿ 4.50 ಟಿಎಂಸಿ ನೀರನ್ನು ಆಲಮಟ್ಟಿ ಜಲಾಶಯದಿಂದ ಜು.21ರಿಂದ ಹರಿಸುವಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ನಾನಾ ಷರತ್ತು ವಿಧಿಸಿ ಆಲಮಟ್ಟಿಯ ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರರಿಗೆ ಅನುಮತಿ ನೀಡಿ ಆದೇಶಿಸಿದ್ದಾರೆ.

    ವಿಜಯಪುರ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಡಿ ನೀರು ಪೂರೈಸುವುದಕ್ಕಾಗಿ ಜಲಾಶಯ ನೀರನ್ನು ಹರಿಸಲು ಸರ್ಕಾರ ಆದೇಶ ಹೊರಡಿಸಿದೆ. ಲಭ್ಯವಿರುವ ನೀರನ್ನು ಆಧರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಮೂಲಕ ತೀವ್ರ ತೆರನಾದ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. 
    ಶಿವಾನಂದ ಪಾಟೀಲ, ಜವಳಿ, ಸಕ್ಕರೆ, ಸಕ್ಕರೆ ಅಭಿವೃದ್ಧಿ, ಕೃಷಿ ಮಾರುಕಟ್ಟೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts