More

    ಅಕ್ರಮ ಮರಳು ಮಾಫಿಯಾ ಸ್ಥಳಕ್ಕೆ ಎಸಿ ಭೇಟಿ

    ಆಲಮಟ್ಟಿ: ಸಮೀಪದ ಬೇನಾಳ ಆರ್‌ಸಿ ಗ್ರಾಮದ ಬಳಿ ಆಲಮಟ್ಟಿ ಜಲಾಶಯ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮರಳು ಸಾಗಣಿಕೆ ಮಾಡುವ ಸ್ಥಳಕ್ಕೆ ಕಂದಾಯ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಹಾಗೂ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

    ಈ ಸಂದರ್ಭ ಮರಳು ಮಿಶ್ರಿತ ಮಣ್ಣನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಸ್ಥಳಕ್ಕೆ ಗಡಿ ಗುರುತಿಸಿ, ಸ್ಥಳದಲ್ಲಿದ್ದ ಮೂರು ಪಂಪ್‌ಸೆಟ್‌ಗಳನ್ನು ಸೀಜ್ ಮಾಡಿದರು.

    ಪ್ರತಿ ವರ್ಷ ಇಲ್ಲಿನ ಕೆಲ ರೈತರು ಲಕ್ಷಾಂತರ ರೂಗಳನ್ನು ಪಡೆದು ಮರಳು ಮಾಫಿಯಾ ನಡೆಸಲು ಅವಕಾಶ ನೀಡುತ್ತಾರೆ. ಲೀಸ್ ಪಡೆದವರು ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಹಣ ನೀಡುತ್ತಿರುವ ಕಾರಣ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದರಿಂದ ನದಿ ತೀರದಲ್ಲಿ ಅಂತರ್ಜಲ ಕುಸಿದು ರೈತರಿಗೆ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಅಗತ್ಯ ಕ್ರಮಕೈಗೊಳ್ಳಿ ಎಂದು ಬೇನಾಳದ ಭಗತ್‌ಸಿಂಗ್ ಯುಥ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಬೋರಣ್ಣವರ ಮನವಿ ಮಾಡಿದರು.

    ಈ ಸ್ಥಳ ಕೃಷ್ಣಾ ಭಾಗ್ಯ ಜಲ ನಿಗಮ ವ್ಯಾಪ್ತಿಗೆ ಬರುವುದರಿಂದ ಅವರಿಗೆ ನೋಟಿಸ್ ನೀಡಲಾಗುವುದು. ಜತೆಗೆ ಎರಡು ಕಡೆ ಖಾಸಗಿ ಜಮೀನಿನಲ್ಲಿ ನಡೆದಿರುವುದು ಗಮನಕ್ಕೆ ಬಂದಿದ್ದು ಆ ಜಮೀನುಗಳ ಮೇಲೆ ಬೋಜಾ ಕೂಡಿಸಲಾಗುವುದು. ಮತ್ತೆ ಅಕ್ರಮ ಮರಳು ಗಣಿಗಾರಿಕೆ ನಡೆದರೆ ತಕ್ಷಣ ಗಮನಕ್ಕೆ ತಂದರೆ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದರು.

    ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ, ಕಂದಾಯ ನಿರೀಕ್ಷಕ ಸಲೀಂ ಯಲಗೋಡ, ಗ್ರಾಮಲೆಕ್ಕಾಧಿಕಾರಿ ಅಪ್ಪು ಘಂಟಿ ಸೇರಿ ಕಂದಾಯ ಹಾಗೂ ಪೊಲೀಸ್ ಇಲಾಖೆಯವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts