More

    ಅನ್ನದಾತ, ಸೈನಿಕ ದೇಶದ ಬೆನ್ನೆಲುಬು

    ಬೀಳಗಿ: ರೈತರು ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು ಎಂಬ ನಾಡು ನುಡಿಯಂತೆ ಅನ್ನ ನೀಡುವ ಅನ್ನದಾತ ಮತ್ತು ಸೈನಿಕರು ನಮ್ಮ ದೇಶದ ಬೆನ್ನೆಲುಬು. ಅನ್ನದಾತ ಸುಖಿಯಾಗಿದ್ದರೆ ಎಲ್ಲರೂ ಸುಖಿಯಾಗಿ ಇರಲು ಸಾಧ್ಯ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

    ತಾಲೂಕಿನ ಸುನಗ ಗ್ರಾಮದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಅನ್ನದಾತ ಸಹಕಾರಿ ಸಂಘದ ನೂತನ ಶಾಖೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಸ್ಥೆ ಅಧ್ಯಕ್ಷ ಎಂ.ಎನ್. ಪಾಟೀಲರು ಈ ಭಾಗದ ರೈತರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡು ಅತಿ ಸಣ್ಣ ವಯಸ್ಸಿನಲ್ಲಿ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಬೃಹತ್ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಎಲ್‌ಕೆಜಿಯಿಂದ ಪಿಜಿಯವರೆಗೆ ಒಂದೇ ಸೂರಿನಲ್ಲಿ ಶಿಕ್ಷಣ ಹಾಗೂ ಈ ಭಾಗದವರಿಗೆ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡಲು 18 ಶಾಖೆಯುಳ್ಳ ಸಹಕಾರಿ ಕ್ಷೇತ್ರ ಬ್ಯಾಂಕ್, ರಾಜಕೀಯ, ಸಾಮಾಜಿಕ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

    ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಮಳೆ, ಗಾಳಿ, ಬಿಸಿಲು ಎನ್ನದೆ ಗದ್ದೆಯಲ್ಲಿ ದುಡಿಯುತ್ತಿದ್ದಾರೆ. ರೈತರಿಗೆ ಸಹಾಯ ಸಹಕಾರ ನೀಡುವ ನಿಟ್ಟಿನಲ್ಲಿ ಪ್ರಥಮದಲ್ಲಿ ಗ್ರಾಮೀಣ ಭಾಗದಲ್ಲಿ ಅನ್ನದಾತ ಕೇಂದ್ರ ತೆರೆಯಲಾಗಿದೆ. ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಬೆಳವಣಿಗೆಗೆ ಈ ಭಾಗದ ಎಲ್ಲ ಸಮುದಾಯದ ಜನರ ಪ್ರೀತಿ ವಿಶ್ವಾಸದಿಂದ ಸಾಧ್ಯವಾಗಿದೆ ಎಂದರು.

    ಪ್ರವೀಣ ಎನ್. ಹಿರೇಮಠ ಸ್ವಾಮಿಗಳು, ನಿರ್ದೇಶಕರಾದ ದಯಾನಂದ ಪಾಟೀಲ, ಹಣಮಂತ ಅಂಟಿನಿ, ಆರ್.ಎಸ್. ಪಾಟೀಲ, ಬಿ.ಪಿ. ಪಾಟೀಲ, ವೀರೇಂದ್ರ ಪಾಟೀಲ, ಮಲ್ಲಪ್ಪಣ್ಣ ಮೇಟಿ, ಶರಣಪ್ಪ ಆಗ್ನಿ, ವೆಂಕಣ್ಣ ಬರಗಿ, ಸ್ವಾಮಿ ವಿವೇಕಾನಂದ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಪ್ರವೀಣ ಕಡಕೋಳ, ಆರ್.ಜಿ. ಪಾಟೀಲ, ರಾಮಚಂದ್ರ ನಾಯಕ, ರಾಜಶೇಖರ ಪಾಟೀಲ, ವಿ.ಆರ್. ಹಿರೇನಿಂಗಪ್ಪನ್ನವರ, ವೆಂಕನಗೌಡ ಪಾಟೀಲ, ಎಚ್.ಬಿ. ದಳವಾಯಿ, ಜಗದೀಶ ಬೋರಡ್ಡಿ, ಶ್ರೀಶೈಲ ಮೇಟಿ, ಸಾಬಣ್ಣ ಕಲಾದಗಿ, ಮಹೇಶ ಲಮಾಣಿ, ಸಂಗನಬಸು ತೋಳಮಟ್ಟಿ ಹಾಗೂ ನಿರ್ದೇಶಕ ಮಂಡಳಿ ಮತ್ತು ಸುನಗ ಗ್ರಾಮದ ಸಲಹಾ ಸಮಿತಿ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts