More

    ರೈತರಿಂದ 281 ಕೋಟಿ ರೂ.ಸಾಲ ಮರು ಪಾವತಿ

    ಬೆಂಗಳೂರು:ಸುಸ್ತಿ ಸಾಲಗಳ ಬಡ್ಡಿ ಮನ್ನಾ ಯೋಜನೆಯಡಿ ರಾಜ್ಯಾದ್ಯಂತ 29,456 ರೈತರಿಂದ ಒಟ್ಟು 281 ಕೋಟಿ ರೂ. ಸುಸ್ತಿ ಸಾಲವು ಸಹಕಾರ ಬ್ಯಾಂಕ್​ಗಳಿಗೆ ಮರು ಪಾವತಿಯಾಗಿದೆ.

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್​ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​(ಡಿಸಿಸಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್​ಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಧ್ಯಮಾವಧಿ, ದೀರ್ಘಾವಧಿ ಸಾಲ ಪಡೆದು ಮರುಪಾವತಿಸಲು ರೈತರಿಗೆ ಸಾಧ್ಯವಾಗಿರಲಿಲ್ಲ. ಇದನ್ನು ಮನಗಂಡು 2023ರ ಡಿ.31ಕ್ಕೆ ಸುಸ್ತಿಯಾಗಿರುವ ರೈತರು ಕೃಷಿ ಸಂಬಂಧಿತ ಸಾಲದ ಕಂತುಗಳ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ಬರಗಾಲ ಹಿನ್ನೆಲೆಯಲ್ಲಿ ಮರು ಪಾವತಿ ಅವಧಿಯನ್ನು ಮಾ.31ರವರೆಗೆ ವಿಸ್ತರಿಸಲಾಗಿತ್ತು. ಹೀಗಾಗಿ ಯೋಜನೆಯಡಿ 29,456 ರೈತರು ವಿವಿಧ ಸಹಕಾರ ಬ್ಯಾಂಕ್​ಗಳಲ್ಲಿ ತಾವು ಪಡೆದಿದ್ದ ಸಾಲವನ್ನು ಮರು ಪಾವತಿಸಿದ್ದಾರೆ. ಸಾಲದ ಮೇಲಿನ 214 ಕೋಟಿ ರೂ. ಬಡ್ಡಿಯನ್ನು ಸರ್ಕಾರ ಬ್ಯಾಂಕ್​ಗಳಿಗೆ ನೀಡಿದೆ.

    ಶೂನ್ಯ ಬಡ್ಡಿಯ ಕೃಷಿ ಸಾಲದ ಮಿತಿ ಹೆಚ್ಚಿಸಿರುವುದು, ಸಾಲ ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದು ಸೇರಿ ಇತರ ಅನುಕೂಲಕರ ನಿಯಮಗಳಿಂದ ಸಾಕಷ್ಟು ರೈತರು, ಸಹಕಾರಿ ಬ್ಯಾಂಕ್​ಗಳಲ್ಲಿ ಅರ್ಜಿ ಹಾಕಿ ಕೃಷಿ ಸಾಲ ಪಡೆದಿದ್ದರೆ, ಇನ್ನೂ ಕೆಲವರು ವಿವಿಧ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲ ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಸಹಕಾರಿ ಬ್ಯಾಂಕ್​ಗಳಲ್ಲಿ ಸಾಲ ಪಡೆಯುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. 2023&24ರಲ್ಲಿ ರಾಜ್ಯಾದ್ಯಂತ 19,63,962 ರೈತರು ಒಟ್ಟು 15,900 ಕೋಟಿ ರೂ. ಸಾಲ ಪಡೆದಿದ್ದಾರೆ. ಮಳೆ ಕೊರತೆ, ಬೆಳೆ ಹಾನಿ, ಸೂಕ್ತ ಬೆಲೆ ಸಿಗದಿರುವುದು ಸೇರಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕ್​ಗಳ ಮಾದರಿಯಂತೆ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಇರುವ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಸರ್ಕಾರವನ್ನು ರೈತರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

    ಎನ್.ಐ. ಎ ತಂಡ ಮತ್ತು ಕರ್ನಾಟಕ ಪೊಲೀಸ್‌ನ್ನು ಶ್ಲಾಘಿಸಿದ ಸಿಎಂ

    2,888 ಮಂದಿ ಸಾಲ ಪಡೆದು ನಾಪತ್ತೆ: 
    ಪಟ್ಟಣ ಸಹಕಾರ ಬ್ಯಾಂಕ್​, ಡಿಸಿಸಿ ಸೇರಿ ವಿವಿಧ ಸಹಕಾರ ಬ್ಯಾಂಕ್​ಗಳಲ್ಲಿ ಒಟ್ಟು 2,888 ಮಂದಿ ಸಾಲ ಪಡೆದು ನಾಪತ್ತೆಯಾಗಿದ್ದಾರೆ. ಸಾಲಗಾರರು, ತಾವು ಪಡೆದಿರುವ ಸಾಲವನ್ನು ಮರು ಪಾವತಿಸದ ಪರಿಣಾಮ ಅಸಲಿಗಿಂತ ಬಡ್ಡಿ ಜಾಸ್ತಿಯಾಗಿದೆ. ಬ್ಯಾಂಕ್​ಗಳಿಗೆ ಇಂಥ ಸಾಲಗಾರರ ಸುಳಿವು ಸಿಗದಂತಾಗಿದೆ. ಕೆಲವರು ತಪ್ಪು ವಿಳಾಸ ಕೊಟ್ಟು ಸಾಲ ಪಡೆದಿರುವುದೂ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ 2,485 ಮಂದಿಯಿಂದ 1,406 ಕೋಟಿ ರೂ., ಮೈಸೂರು 132 ಸಾಲಗಾರರಿಂದ 57 ಲಕ್ಷ ರೂ. ಬೆಳಗಾವಿ 15 ಮಂದಿಯಿಂದ 41 ಲಕ್ಷ ರೂ ವಿವಿಧ ಸಹಕಾರ ಬ್ಯಾಂಕ್​ಗಳಲ್ಲಿ ಸಾಲ ಪಡೆದು ನಾಪತ್ತೆಯಾಗಿದ್ದಾರೆ. ನಕಲಿ ದಾಖಲೆ ಪಡೆದು ಸಾಲ ನೀಡಿಕೆ, ಆಸ್ತಿ ಮೌಲ್ಯಕ್ಕಿಂತ ಹೆಚ್ಚಿನ ಸಾಲ ನೀಡಿಕೆ, ಸಾಲ ವಸೂಲಾತಿಗೆ ವಿಲ ಸೇರಿ ಇತರೆ ಕಾರಣಗಳಿಂದ ಬ್ಯಾಂಕ್​ಗಳು ನಷ್ಟ ಹೊಂದುತ್ತಿವೆ. ಹೆಚ್ಚು ಸಾಲ ಪಡೆದು ಉಳಿಸಿಕೊಂಡಿರುವವರ ಪೈಕಿ ಆಡಳಿತ ಮಂಡಳಿ ಸದಸ್ಯರು, ಅವರ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಬಂಧಿಕರಿಗೆ ಮತ್ತು ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಸಾಲ ನೀಡಲಾಗಿದೆ.

    50 ವಿವಿಧ ಬಗೆಯ ಸಂಘಗಳು: 
    15 ಬಹುರಾಜ್ಯಮಟ್ಟದ ಸಹಕಾರ ಸಂಘ, 44 ಸಹಕಾರ ಮಹಾಮಂಡಳ, 21 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​, 180 ಗ್ರಾಮೀಣ ಬ್ಯಾಂಕ್​, 5844 ಕೃಷಿ ಪತ್ತಿನ ಸಹಕಾರ ಬ್ಯಾಂಕ್​, 25 ಲ್ಯಾಂಪ್ಸ್​ ಸಹಕಾರ ಬ್ಯಾಂಕ್​, 43 ರೇಷ್ಮೆ ಬೆಳೆಗಾರ ಬ್ಯಾಂಕ್​, 105 ಸಹಕಾರ ಗ್ರೇನ್​ ಬ್ಯಾಂಕ್​, 284 ಪಟ್ಟಣ ಸಹಕಾರ ಬ್ಯಾಂಕ್​, 3554 ಪತ್ತಿನ ಸಹಕಾರ ಬ್ಯಾಂಕ್​, 1258 ನೌಕರರ ಪತ್ತಿನ ಬ್ಯಾಂಕ್​, 243 ಟಿಎಪಿಸಿಎಂಎಸ್​, 106 ಮಾರಾಟ ಸಹಕಾರ ಬ್ಯಾಂಕ್​, 37 ಸಹಕಾರಿ ಸಕ್ಕರೆ ಕಾರ್ಖಾನೆ, 156 ಸಂಸ್ಕರಣ ಸಹಕಾರ ಸಂ, 16 ಸಹಕಾರಿ ನೂಲಿನ ಗಿರಣಿ ಸೇರಿ 50 ವಿವಿಧ ಬಗೆಯ ಸಂಘಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts