

ಕಾರ್ಕಳ: ಯುವ ಜನತೆ ರಾಷ್ಟ್ರದ ಭವಿಷ್ಯವಾಗಿದ್ದು , ಪ್ರಾವಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ದೇಶ ಪ್ರಗತಿಯ ವಾರ್ಗದಲ್ಲಿ ಸಾಗುತ್ತದೆ ಎಂದು ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಹೇಳಿದರು.
ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ ಕರ್ನಾಟಕ ಎನ್ಸಿಸಿ ಉಪನೌಕಾ ಟಕದ ಉದ್ಘಾಟನಾ ಸವಾರಂಭದಲ್ಲಿ ಮಾತನಾಡಿದರು.
6 ಕರ್ನಾಟಕ ಎನ್ಸಿಸಿ ನೌಕಾ ಟಕ ಉಡುಪಿಯ ಕವಾಂಡಿಂಗ್ ಆಫೀಸರ್ ಕವಾಂಡರ್ ಅಶ್ವಿನ್ ಎಂ.ರಾವ್ ಎನ್ಸಿಸಿಯ ಶ್ರೇಷ್ಠತೆ, ಅದರಲ್ಲಿರುವ ಅವಕಾಶಗಳು, ಭಾರತೀಯ ರಕ್ಷಣಾ ಪಡೆಯೊಂದಿಗಿನ ನಂಟು, ಯುವಜನತೆಯ ಪಾತ್ರ ಮತ್ತು ದೇಶದ ಭವಿಷ್ಯ ನಿರ್ವಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಾಹಿತಿ ನೀಡಿದರು.
ಲೆಫ್ಟಿನೆಂಟ್ ಕವಾಂಡರ್ ಎಂ.ಎ.ಮುಲ್ತಾನಿ, ಪಿ.ಐ. ಸಿಬ್ಬಂದಿ ವರ್ಗ, ಕಾಲೇಜು ಎನ್ಸಿಸಿ ನೌಕಾ ಟಕದ ಸಿಟಿಒ ಮಹೇಶ್ ಆರ್.ಶೆಣೈ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಸುದೀಕ್ಷಾ ಎಸ್.ಪೈ ನಿರೂಪಿಸಿದರು.