

ಶಿರಸಿ: ನಾಸಿಕದ ತರಬೇತಿ ಕೇಂದ್ರದಲ್ಲಿ ಇದುವರೆಗೆ ಅಂದಾಜು 80,000 ಯೋಧರಿಗೆ ತರಬೇತಿ ನೀಡಿದ್ದೇನೆ. ವಿಶ್ವಸಂಸ್ಥೆಯ ವಿಶ್ವಶಾಂತಿ ಪಡೆಗೆ ಆಯ್ಕೆಯಾಗಿ ಇಸ್ರೇಲ್ ಹಾಗೂ ಸಿರಿಯಾದಲ್ಲಿ ಕೆಲಸ ನಿರ್ವಹಿಸಿದ್ದೇನೆ. ದೇಶದ ಸೇನೆಯೇ ದೇಶದ ದೊಡ್ಡ ಹೆಮ್ಮೆಯಾಗಿದೆ ಎಂದು ಯೋಧ ಧನಂಜಯ ನಾಯ್ಕ ಹೇಳಿದರು.
ಸೈನಿಕರ ದಿನದ ಅಂಗವಾಗಿ ತಾಲೂಕಿನ ಕೆಂಚಗದ್ದೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡದಿರು.
ಯೋಧ ಶ್ರೀನಿವಾಸ ನಾಯ್ಕ ಮಾತನಾಡಿ, ದೇಶಸೇವೆಯೇ ನಮ್ಮ ಪ್ರಮುಖ ಗುರಿ. ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೈನ್ಯ ಸೇರುವ ಅವಕಾಶಗಳಿದ್ದು, ಸದುಪಯೋಗ ಪಡೆಯಬೇಕು ಎಂದರು.
ಕಲಗದ್ದೆ ಗ್ರಾಮದ ಮಾಜಿ ಯೋಧ ಎನ್.ವಿ. ಹೆಗಡೆ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಪೂಜಾರಿ, ವೈದ್ಯ ರವಿಕಿರಣ ಪಟವರ್ಧನ್, ವಿ.ಎಂ. ಹೆಗಡೆ ಕಲಗದ್ದೆ, ವೆಂಕಟ್ರಮಣ ಹೆಗಡೆ, ಪಿ.ಜಿ. ಹೆಗಡೆ, ವೆಂಕಟ್ರಮಣ ಹೆಗಡೆ ಕೆಂಚಗದ್ದೆ, ರವೀಂದ್ರ ಹೆಗಡೆ, ನರಸಿಂಹ ಹೆಗಡೆ, ಮಹೇಶ ಹೆಗಡೆ ಕಲಗದ್ದೆ, ಬರೂರು ಗ್ರಾಪಂ ಅಧ್ಯಕ್ಷೆ ಚಂದ್ರಮತಿ ನಾಯ್ಕ, ಉಪಾಧ್ಯಕ್ಷ ಭರತ ಹೆಗಡೆ, ಶಿಕ್ಷಕ ಡಿ.ಪಿ. ಶರ್ಮ ಹಾಗೂ ನಾಗರಿಕರು ಇದ್ದರು. ಇದಕ್ಕೂ ಮುನ್ನ ಯೋಧರನ್ನು ಜನತಾ ಕಾಲನಿ ಯುವಕರು ಸಾಂಪ್ರದಾಯಿಕ ಡೊಳ್ಳು ಕುಣಿತದ ಮೂಲಕ ಸ್ವಾಗತಿಸಿದರು. ರಂಜಿತಾ ಪ್ರಸನ್ನ, ಮುಖ್ಯಶಿಕ್ಷಕ ದೇವರಾಜ ಆಚಾರಿ ನಿರ್ವಹಿಸಿದರು.
ಸೈನಿಕರ ಪಾಲಕರಿಗೆ ಸನ್ಮಾನ: ಇಬ್ಬರೂ ಯೋಧರು ಸೊಸೈಟಿ ಕಾಲನಿಯ ನಾರಾಯಣ ನಾಯ್ಕ ಮತ್ತು ಜಾನಕಿ ನಾಯ್ಕ ದಂಪತಿ ಪುತ್ರರು. ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿದ ದಂಪತಿಯನ್ನು ನಾಗರಿಕರು ಸನ್ಮಾನಿಸಿದರು.