ಜಾಗತಿಕ ಮಟ್ಟದಲ್ಲಿ ದೇಶ ಬಲಿಷ್ಠ

nitte
ನಿಟ್ಟೆ ಕ್ಯಾಂಪಸ್‌ನಲ್ಲಿ ನಿಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮಾಜಿ ನಿರ್ದೇಶಕ ಪ್ರೊ.ಡಾ.ಗುರುರಾಜ್ ಕಿದಿಯೂರು ಧ್ವಜಾರೋಹಣಗೈದರು
Published on

ಕಾರ್ಕಳ: ಇಂದು ದೇಶ ಆಹಾರ, ಆರೋಗ್ಯ, ತಂತ್ರಜ್ಞಾನ, ಪ್ರವಾಸೋದ್ಯಮ, ಜಿಡಿಪಿ ಬೆಳವಣಿಗೆ ವಿಚಾರಗಳಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ದೇಶವನ್ನು ಬಲಿಷ್ಠವಾಗಿಸುವ ನಿಟ್ಟಿನಲ್ಲಿ ಕೈಜೋಡಿಸೋಣ ಎಂದು ನಿಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಕ್‌ಮೆಂಟ್ ಮಾಜಿ ನಿರ್ದೇಶಕ ಪ್ರೊ.ಡಾ.ಗುರುರಾಜ್ ಕಿದಿಯೂರು ಹೇಳಿದರು.

ನಿಟ್ಟೆ ಕ್ಯಾಂಪಸ್‌ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಿಟ್ಟೆ ತಾಂತ್ರಿಕ ಕಾಲೇಜಿನ 6 ಕೆ.ಎ.ಆರ್ ನೇವಲ್ ಎನ್.ಸಿ.ಸಿ ಘಟಕ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಡಾ.ಎನ್.ಎಸ್.ಎ.ಎಂ ಶಾಲೆ ಸ್ಕೌಟ್ಸ್-ಗೈಡ್ಸ್, ಎನ್.ಸಿ.ಸಿ ಕೆಡೆಟ್, ಕಾಲೇಜು ಸುರಕ್ಷತಾ ಸಿಬ್ಬಂದಿ ವರ್ಗ, ಶಿಕ್ಷಕರು, ಬೊಧಕೇತರ ಸಿಬ್ಬಂದಿ, ನಿಟ್ಟೆ ಸಮೂಹ ವಿದ್ಯಾಸಂಸ್ಥೆ ಪ್ರಾಂಶುಪಾಲರು, ನಿರ್ದೇಶಕರು, ಉಪಪ್ರಾಂಶುಪಾಲರು, ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಾಘವೇಂದ್ರ ಬಾಯರಿ ವಂದಿಸಿದರು. ನಿಟ್ಟೆ ಶಾಲೆ ಎನ್.ಸಿ.ಸಿ ಘಟಕದ ಉಸ್ತುವಾರಿ ಅಧಿಕಾರಿ ಉಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net