ಮತ್ಸ್ಯಕ್ಷಾಮ ನಿವಾರಣೆಗೆ ಪ್ರಾರ್ಥನೆ

prayer
ಮರವಂತೆ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ವತಿಯಿಂದ ಮತ್ಸ್ಯಕ್ಷಾಮ ನಿವಾರಣೆಗಾಗಿ ಮೀನುಗಾರರು ಮರವಂತೆ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು
Published on

ಗಂಗೊಳ್ಳಿ: ಮರವಂತೆ ಶ್ರೀ ರಾಮ ಮಂದಿರ ಮೀನುಗಾರರ ಸೇವಾ ಸಮಿತಿ ವತಿಯಿಂದ ಮತ್ಸ್ಯಕ್ಷಾಮ ನಿವಾರಣೆಗಾಗಿ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೀನುಗಾರಿಕೆ ಪ್ರಾರಂಭವಾಗಿ 15 ದಿನ ಕಳೆದರು ನಿರೀಕ್ಷೆಯಂತೆ ಮೀನುಗಾರಿಕೆ ನಡೆದಿಲ್ಲ. ಮತ್ಸ್ಯಕ್ಷಾಮದಿಂದ ಮೀನುಗಾರಿಕೆಗೆ ತೆರಳಿರುವ ದೋಣಿಗಳು ಬರಿಗೈಯಲ್ಲಿ ವಾಪಸ್ ಬರುವಂತಾಗಿದೆ. ಮುಂದಿನ ದಿನಗಳಲ್ಲಿ ಸಮೃದ್ಧ ಮತ್ಸ್ಯ ಸಂಪತ್ತು ದೊರೆಯುವಂತಾಗಲಿ ಎಂದು ಶ್ರೀ ವರಾಹ ದೇವರಿಗೆ ಆಭಾರಿ ಸೇವೆ, ವಿಷ್ಣು ದೇವರಿಗೆ ಸುವರ್ಣ ಹಾರ ಸಮರ್ಪಣೆ, ಈಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ ನೀಡುವುದಾಗಿ ಹರಕೆ ಹೊತ್ತು ಕೊಂಡರು.

ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಸುರೇಶ ಖಾರ್ವಿ, ಕಾರ್ಯದರ್ಶಿ ಶೇಖರ ಖಾರ್ವಿ, ಮಾಜಿ ಅಧ್ಯಕ್ಷ ವಾಸುದೇವ ಖಾರ್ವಿ, ಶ್ರೀ ರಾಮ ಕರಾವಳಿ ಸಹಕಾರಿ ಸಂಘ ಅಧ್ಯಕ್ಷ ವೆಂಕಟರಮಣ ಖಾರ್ವಿ, ದೇವಸ್ಥಾನ ಆಡಳಿತ ಧರ್ಮದರ್ಶಿ ಸತೀಶ ಎಂ.ನಾಯಕ್, ಮೀನುಗಾರರ ಸೇವಾ ಸಮಿತಿ ಪದಾಧಿಕಾರಿಗಳು, ಮೀನುಗಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net