ಶಿಕ್ಷಣಕ್ಕೆ ಮಠಗಳ ಕೊಡುಗೆ ಅಪಾರ

31savadatti2
Published on

ಸವದತ್ತಿ: ಪ್ರತಿಯೊಬ್ಬರಿಗೂ ಉತ್ತಮ ಶಿಣ, ಸಂಸತಿ ಹಾಗೂ ಸಂಸ್ಕಾರ ನೀಡುವಲ್ಲಿ ಮಠ&ಮಂದಿರಗಳ ಪಾತ್ರ ಹಿರಿದಾಗಿದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಇಲ್ಲಿನ ಬೆಟಸೂರ ಮಠದಲ್ಲಿ ಮುಜರಾಯಿ ಇಲಾಖೆ ಯೋಜನೆಯಡಿ ನಿರ್ಮಿಸಿದ ಮಠದ ಸಭಾಭವನ ಹಾಗೂ ಮುಖ್ಯದ್ವಾರ ಸೋಮವಾರ ಉದ್ಘಾಟಿಸಿ ಮಾತನಾಡಿ, ಎಲ್ಲರ ಪ್ರಯತ್ನದಿಂದ ಮಠದ ಜೀಣೋರ್ದ್ಧಾರ ನಡೆದಿದೆ. ಮಠ ಮಾನ್ಯಗಳು ಶಿಣಕ್ಕೆ ಒತ್ತು ಕೊಟ್ಟಿವೆ. ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ತರಲಾವುದು. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ಅನೇಕ ಸರ್ಕಾರಿ ಶಾಲೆ&ಕಾಲೇಜುಗಳ ಮೂಲಕ ಶಿಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಬಡವರಿಗಾಗಿ 5 ಲ ರೂ. ಆಯುಷ್ಮಾನ್​ ಭಾರತ ಆರೋಗ್ಯ ಯೋಜನೆ ರೂಪಿಸಿದೆ ಎಂದರು.

ಬಿಜೆಪಿ ಮಂಡಲ ಅಧ್ಯ ವಿರೂಪಾ ಮಾಮನಿ ಮಾತನಾಡಿ, ಬೆಟಸೂರ ಮಠದ ಸಭಾಂಗಣ ನಿರ್ಮಾಣದಿಂದ ಭಕ್ತರಿಗೆ ಅನುಕೂಲವಾಗಿದೆ. ಮಠದ ಅಭಿವೃದ್ಧಿಗಾಗಿ 30 ಲ ರೂ. ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಬಡ ವಿದ್ಯಾರ್ಥಿಗಳ ವಸತಿ, ಜ್ಞಾನರ್ಜನೆಗೆ ವ್ಯವಸ್ಥೆ ಕಲ್ಪಿಸುವ ಸದುದ್ದೇಶ ಹೊಂದಿದೆ ಎಂದರು.

ಬಿಡಿಸಿಸಿ ಬ್ಯಾಂಕ್​ ನಿರ್ದೇಶಕಿ ರತ್ನಾ ಮಾಮನಿ ಮಾತನಾಡಿದರು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಜಗದೀಶ ಶಿಂತ್ರಿ, ವಕೀಲ ಬಿ.ವಿ.ಮಲಗೌಡರ, ಮಹಿಳಾ ಮೋರ್ಚಾ ಜಿಲ್ಲಾಧ್ಯೆ ಡಾ.ನಯನಾ ಭಸ್ಮೆ, ಜಗದೀಶ ಕೌಜಗೇರಿ, ಬಸವರಾಜ ಕಾರದಗಿ, ಅಶೋಕ ಉದಪುಡಿ, ಎನ್​.ಸಿ.ಬೆಂಡಿಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net