

ಇಟಗಿ: ವಿಶ್ವಕ್ಕೆ ಭಾರತದ ವಿಜ್ಞಾನಿಗಳ ಕೊಡುಗೆ ಅಪಾರವಾಗಿದ್ದು, ವೆಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ರಾಷ್ಟ್ರೀಯ ವಿಜ್ಞಾನ ದಿನ ಅನುಕೂಲ ಎಂದು ಪಾರಿಶ್ವಾಡ ಹನಿವೆಲ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಡಾ.ಅನಿಲಕುಮಾರ ಬೆಣಗಿ ಹೇಳಿದರು.
ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಆಧುನಿಕ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಸಂಶೋಧನೆ ಮತ್ತು ಪ್ರಾಯೋಗಿಕ ಅಧ್ಯಯನ ಅವಶ್ಯವಾಗಿದ್ದು ವಿಜ್ಞಾನಿಗಳಾಗಲು ನಿರಂತರ ಪರಿಶ್ರಮ ಮತ್ತು ತಾಳ್ಮೆ ಅವಶ್ಯ ಎಂದರು.
ವಿದ್ಯಾರ್ಥಿಗಳು ವಿಜ್ಞಾನ ಪ್ರಾತ್ಯಕೆ ಪ್ರದರ್ಶಿಸಿದರು. ಶ್ರೀದೇವಿ ಪಡೆನ್ನವರ, ರಚಿತಾ ಡೊಂಗರಗಾವಿ ಮಾತನಾಡಿದರು. ಅತಾ ಪಾಟೀಲ, ಪೂಜಾ ಊಗಾರ ನಿರೂಪಿಸಿದರು. ವೈಷ್ಣವಿ ಹಲಸಗಿ ಸ್ವಾಗತಿಸಿದರು. ಸಾನೀಯಾ ತಾನೇಖಾನ ವಂದಿಸಿದರು.