

ಕೂಡ್ಲಿಗಿ: ಮನುಷ್ಯನು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ಸಾಗಿಸಲು ಅಗತ್ಯ ಇರುವ ಎಲ್ಲರೂ ಮೌಲ್ಯಯುತ ಶಿಕ್ಷಣ ಪಡೆಯಬೇಕು ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು.
ಪಟ್ಟಣದ ಚಂದ್ರಶೇಖರ್ ಆಜಾದ್ ರಂಗ ಮಂದಿರದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರ ಬೇಡಿಕೆಯಂತೆ ಶೀಘ್ರವಾಗಿ ಗುರುಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನಿವೃತ್ತಿಯ ನಂತರ ಸ್ವಲ್ಪ ದಿನ ಮನಸ್ಸಿಗೆ ತಳ ಮಳ ಉಂಟಾಗಬಹುದು.ಆದ್ದರಿಂದ ಆರೋಗ್ಯದ ಕಡೆಗೆ ಕಾಳಜಿವಹಿಸಬೇಕು. ನನಗೆ ಪೇಟ, ಹಾರ, ತುರಾಯಿ ಬೇಡ. ತಲೆ ಮೇಲೆ ಪೇಟ ತೊಡಿಸಿ, ಕೈಯಲ್ಲಿ ಅಂಬೇಡ್ಕರ್ ಪೋಟೋ ನೀಡಿದರೆ ಅದು ಅಂಬೇಡ್ಕರ್ ಸಿದ್ದಾಂತಕ್ಕೆ ವಿರುದ್ದವಾದದ್ದು, ಪೇಟೆ ಹಾಕಿಕೊಂಡರೆ ರಾಜಪ್ರಭುತ್ವವಾಗುತ್ತದೆ. ಆದ್ದರಿಂದ ಅಂಬೇಡ್ಕರ್ ಪೋಟೋವನ್ನು ಮಾತ್ರ ನೀಡಿ, ಸಂವಿಧಾನ ಅಶಯದಂತೆ ಎಲ್ಲರೂ ಸಮಾನಾವಾಗಿ ಬಾಳೋಣ ಎಂದರು.
ಇದಕ್ಕೂ ಮೊದಲು ಮೇ 31ರವರೆಗೆ ನಿವೃತ್ತರಾದ ಕ್ಷೇತ್ರದ ಶಿಕ್ಷಕರಿಗೆ ಸನ್ಮಾನ ಮಾಡಿದರು. ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್ ಹಾಗೂ ಹಳೇ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ, ನಿರ್ದೇಶಕ ಎಂ. ಗುರುಸಿದ್ದನಗೌಡ, ತಾಪಂ ಇಒ ವೈ. ರವಿಕುಮಾರ್, ಬಿಇಒ ಯುವರಾಜ್ ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಎಂ. ವೀರಯ್ಯ, ಪಪಂ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ, ಸೈಯದ್ ಶುಕೂರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೌಡ್ರು ಕೊಟ್ರೇಶ್, ಜಿಲ್ಲಾ ಪ್ರಾಧಾನ ಕಾರ್ಯದರ್ಶಿ ಬಿ.ಬಿ. ಶಿವಾನಂದ, ಉಪಾಧ್ಯಕ್ಷೆ ಗೀತಾ, ಕೆ. ಜಿನಾಬಿ, ಎಚ್. ಇಂದಿರಾ, ಗೀತಾ ಬಾಪ್ರಿ, ಹಿರೇಕುಂಬಳ ಗುಂಟೆ ಉಮೇಶ್, ಟಿ.ಜಿ. ಮಲ್ಲಿಕಾರ್ಜುನಗೌಡ, ಕೋಗಳಿ ಮಂಜುನಾಥ, ಎಸ್. ವೆಂಕಟೇಶ್, ಸಿದ್ದಪ್ಪ, ಬಸಪ್ಪ, ಮಾದೇಹಳ್ಳಿ ನಜೀರ್ ಸಾಬ್, ಕೆ.ಸಿದ್ದಪ್ಪ, ಜಿಲಾನ್, ಪಿ.ವಿ.ಕೊತ್ಲಪ್ಪ,ಪದಾಧಿಕಾರಿಗಳು ಇದ್ದರು.