ಕುಂಟುತ್ತಾ ಸಾಗಿದೆ ಕಾಂಪೌಂಡ್ ಕಾಮಗಾರಿ

ಕುಂಟುತ್ತಾ ಸಾಗಿದೆ ಕಾಂಪೌಂಡ್ ಕಾಮಗಾರಿ
Published on

ಬಿ.ಎಲ್.ಲಕ್ಷ್ಮಣ್ ಬೇಲೂರು
ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಮೇಲ್ಭಾಗದಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸುವ ಕಾಮಗಾರಿ ಕುಂಟುತ್ತ ಸಾಗಿದೆ. ಶಾಸಕರು, ಪುರಸಭೆ ಮುಖ್ಯಾಧಿಕಾರಿಗಳು ಇತ್ತ ಗಮನಹರಿಸಿ ಕಾಮಗಾರಿ ಶೀಘ್ರ ಮುಗಿಸುವಂತೆ ಕ್ರೀಡಾಪಟುಗಳು, ನಾಗರಿಕರು ಆಗಹಿಸಿದ್ದಾರೆ.

ಬೇಲೂರಿನ ನಾಗರಿಕರು ಹಾಗೂ ಸಂಘ ಸಂಸ್ಥೆಗಳು, ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳ ಹೋರಾಟದ ಫಲ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಉಳಿಯಲು ಕಾರಣವಾಗಿದೆ.

ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸುವುದು, ರಾತ್ರಿ ಸಮಯದಲ್ಲಿ ಕುಡುಕರ ಹಾವಳಿ ಮಿತಿ ಮೀರಿದೆ. ಮದ್ಯ ಕುಡಿದವರು ಬಾಟಲಿಗಳನ್ನು ಒಡೆಯುವುದು, ಆಹಾರ ಪದಾರ್ಥ, ಊಟದ ತಟ್ಟೆ, ಲೋಟ, ಉಳಿದ ಅನ್ನ ಎಲ್ಲೆಂದರಲ್ಲಿ ಹಾಕುವುದರಿಂದ ಮೈದಾನ ಅಶುಚಿತ್ವಕ್ಕೆ ಕಾರಣವಾಗಿದೆ. ವಾಹನಗಳು ಓಡಾಡುವುದರಿಂದ ಮೈದಾನದಲ್ಲಿ ಗುಂಡಿ ಬಿದ್ದು, ಮಳೆ ಬಂದರೆ ನೀರು ನಿಂತು ಕೆಸರುಮಯವಾಗುತ್ತಿದೆ. ಇದು ಶಾಲೆಯ ವಿದ್ಯಾರ್ಥಿಗಳ ಮೇಲೆ ಕೂಡ ಪರಿಣಾಮ ಬೀರಲು ಕಾರಣವಾಗಿದೆ.

ಬೆಳಗ್ಗೆ ವಾಯುವಿಹಾರಿಗಳು ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಬೇಸತ್ತ ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಪುರಸಭೆ ಹಾಗೂ ಶಾಸಕರಿಗೆ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮತ್ತು ಹಿಂದಿನ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮುತುವರ್ಜಿ ವಹಿಸಿ ಕಾಲೇಜು ಮೈದಾನದ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಮುಖ್ಯಮಂತ್ರಿಗಳ ಎಸ್‌ಎಫ್‌ಸಿಯ 30 ಲಕ್ಷ ರೂ. ವಿಶೇಷ ಅನುದಾನದಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಗ್ರಿಲ್ ಕಾಂಪೌಂಡ್ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಯಿತು.

ಆದರೆ, ಕಾಮಗಾರಿ ಪ್ರಾರಂಭವಾದ ದಿನದಿಂದಲೂ ಕುಂಟುತ್ತ ಸಾಗಿದ್ದು, ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಸಾರ್ವಜನಿಕರು, ಕ್ರೀಡಾಪ್ರೇಮಿಗಳು ಬೇಸರಗೊಂಡಿದ್ದಾರೆ.

ಮುಗಿದ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು.
ಎಂ.ಇಂದೂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net