ಉಪ್ಪುಂದದಲ್ಲಿ ರಾಯರ ಆರಾಧನಾ ಮಹೋತ್ಸವ

aaradhana mahotsava
aaradhana mahotsava
Published on

ಬೈಂದೂರು: ಉಪ್ಪುಂದದಲ್ಲಿರುವ ಶ್ರೀ ರಾವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ಗುರುರಾಯರ 354ನೇ ಆರಾಧನಾ ಮಹೋತ್ಸವ ನಡೆಯಿತು. ಬೆಳಗ್ಗೆ ಪಂಚಾಮೃತ ಅಭಿಷೇಕ, ಪಾದಪೂಜೆ, ತೊಟ್ಟಿಲು ಪೂಜೆ, ತುಳಸಿ ಅರ್ಚನೆ, ಮಹಾಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ, ಧಾರ್ಮಿಕ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಭಕ್ತಿಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ತೊಟ್ಟಿಲು ಪೂಜೆ, ಪಲ್ಲಕ್ಕಿ ಉತ್ಸವ, ರಥೋತ್ಸವ ನಡೆಯಿತು. ಇದು ಮಂತ್ರಾಲಯದ ಶಾಖಾ ಮಠವಾಗಿದ್ದು, ಕರಾವಳಿ ಮಂತ್ರಾಲಯ ಎಂದು ಪ್ರಸಿದ್ಧಿ ಪಡೆದಿದೆ. ಶ್ರೀ ಮಠದ ಗೌರವ ವಿಚಾರಣಾಕರ್ತ ಯು. ಸುಭಾಷ್‌ಚಂದ್ರ ಪುರಾಣಿಕ ಉತ್ಸವದ ಉಸ್ತುವಾರಿ ವಹಿಸಿದ್ದರು. ಅನೇಕ ಭಕ್ತರು ರಾಯರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net