ಹಳ್ಳಕ್ಕೆ ಬಿದ್ದ ಕಾರು

ಹಳ್ಳಕ್ಕೆ ಬಿದ್ದ ಕಾರು
Published on

ಸೋಮವಾರಪೇಟೆ: ಸಮೀಪದ ಹೊಸತೋಟ ಗ್ರಾಮದ ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು, ಹಳ್ಳಕ್ಕೆ ಬಿದ್ದ ಘಟನೆ ಬುಧವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾಗಡಿಕಟ್ಟೆಯ ಸೂರ್ಯ ಎಂಬಾತ ಚಾಲಿಸುತ್ತಿದ್ದ ಕಾರು ಹೊಸತೋಟದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಎಡಬದಿಯ ಗುಂಡಿಗೆ ಮಗುಚಿದೆ. ಪರಿಣಾಮ ಪಕ್ಕದಲ್ಲೇ ಇದ್ದ ಖತೀಜಾ ಎಂಬುವವರ ಮನೆ ಜಖಂಗೊಂಡು, ಕಾರಿನ ಮುಂಭಾಗ ಹಾನಿಯಾಗಿದೆ.

ಹೊಸತೋಟದ ತಿರುವಿನಲ್ಲಿ ಆಗಾಗ್ಗೆ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಲೋಕೋಪಯೋಗಿ ಇಲಾಖೆ ಇತ್ತ ಗಮನ ಹರಿಸಿ ರಸ್ತೆ ಬದಿಗೆ ಕ್ರಾಸ್ ಬ್ಯಾರಿಯರ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಹರದೂರು ಗ್ರಾ.ಪಂ. ಸದಸ್ಯ ಸಲೀಂ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net