ಕೆಸರಕೊಪ್ಪ ಗ್ರಾಮದ ಬಳಿ ವಾಲಿದ ಬಸ್

The bus overturned near Kesarakoppa village
ರಬಕವಿ-ಬನಹಟ್ಟಿ ತಾಲೂಕಿನ ಕೆಸರಕೊಪ್ಪ ಗ್ರಾಮದ ಬಳಿ ಸೇತುವೆ ಪಕ್ಕದ ಹದಗೆಟ್ಟ ರಸ್ತೆಯ ಗುಂಡಿಯಲ್ಲಿ ವಾಲಿರುವ ಕೆಎಸ್‌ಆರ್‌ಟಿಸಿ ಬಸ್.
Published on

ರಬಕವಿ-ಬನಹಟ್ಟಿ : ತಾಲೂಕಿನ ಕೆಸರಕೊಪ್ಪ ಗ್ರಾಮದ ಬಳಿ ಮಂಗಳವಾರ ಸಂಜೆ ಸೇತುವೆ ಪಕ್ಕದ ಹದಗೆಟ್ಟ ರಸ್ತೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ನೀರು ತುಂಬಿದ ತಗ್ಗು ಗುಂಡಿಯಲ್ಲಿ ವಾಲಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಸಂಭವನೀಯ ಅಪಾಯ ತಪ್ಪಿದೆ.

ಚಿತ್ತಾಪುರ-ಬನಹಟ್ಟಿ-ಮಹಾಲಿಂಗಪುರ ಮಾರ್ಗವಾಗಿ ಬೆಳಗಾವಿ ಜಿಲ್ಲೆ ಮುಗಳಖೋಡಕ್ಕೆ ಬಸ್ ತೆರಳುತ್ತಿದ್ದಾಗ ಕೆಸರಕೊಪ್ಪ ಗ್ರಾಮದ ಬಳಿ ಬ್ರಿಡ್ಜ್ ಹತ್ತಿರ ಬಸ್ ವಾಲುತ್ತಿದ್ದಂತೆ ಪ್ರಯಾಣಿಕರು ಭಯದಿಂದ ಅವಸರವಾಗಿ ಇಳಿದಿದ್ದಾರೆ.

ಬಸ್ ವಾಲುತ್ತಿದೆ ಅನ್ನಿಸಿದ ತಕ್ಷಣ ಸಮಯ ಪ್ರಜ್ಞೆ ಮೆರೆದ ಚಾಲಕ ಬಸ್‌ನ್ನು ತಕ್ಷಣ ನಿಲ್ಲಿಸಿದ್ದಾರೆ. ಹೀಗಾಗಿ ಬಸ್ ಪೂರ್ಣ ಉರುಳುವುದು ತಪ್ಪಿದೆ. ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ. ಬಸ್‌ನಲ್ಲಿ 25 ರಿಂದ 30 ಪ್ರಯಾಣಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net