More

    ರಸ್ತೆ ಸುಧಾರಣೆಗೆ ಆಗ್ರಹಿಸಿ ಉರುಳು ಸೇವೆ

    ಗುಳೇದಗುಡ್ಡ: ರಸ್ತೆ ಸುಧಾರಣೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷೃ ಖಂಡಿಸಿ ಪಟ್ಟಣದ ಯುವಕ ಮಲ್ಲಿಕಾರ್ಜುನ ಬದಾಮಿಮಠ ಮಳೆ ನೀರು ನಿಂತು ಕೆಸರು ಗದ್ದೆಯಾದ ಹದಗೆಟ್ಟ ರಸ್ತೆಯಲ್ಲಿ ಮಂಗಳವಾರ ಉರುಳು ಸೇವೆ ಮಾಡಿ ರಸ್ತೆ ನಿರ್ಮಿಸದ ಅಧಿಕಾರಿಗಳ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದರು.

    ಪಟ್ಟಣದಿಂದ ಇಳಕಲ್ಲ ನಗರಕ್ಕೆ ಹೋಗುವ ಗುಲಾಬ ಟಾಕೀಜ್‌ನಿಂದ ಹರದೊಳ್ಳಿಯವರೆಗಿನ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ತಗ್ಗು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ನಾಲ್ಕೈದು ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದರೂ ರಸ್ತೆ ನಿರ್ಮಿಸಿಲ್ಲ.

    ನಾನು ಸೇರಿದಂತೆ ಸಾರ್ವಜನಿಕರು ಹದಗೆಟ್ಟಿರುವ ಈ ರಸ್ತೆಯನ್ನು ದುರಸ್ತಿ ಮಾಡುವಂತೆ 3-4 ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಕೆ, ಹೋರಾಟ, ಪ್ರತಿಭಟನೆ ಮಾಡುತ್ತ ಬಂದಿದ್ದೇವೆ. ಆದರೂ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ.

    ರಸ್ತೆ ಸುಧಾರಣೆಗೆ ಆಗ್ರಹಿಸಿ ಉರುಳು ಸೇವೆ

    ಗುಳೇದಗುಡ್ಡದ ಹದಗೆಟ್ಟ ರಸ್ತೆಯಲ್ಲಿ ಯುವಕ ಮಲ್ಲಿರ್ಕಾರ್ಜುನ ಬದಾಮಿಮಠ ಉರುಳು ಸೇವೆ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.

    ಇದರಿಂದ ಬೇಸತ್ತು ನಾನೊಬ್ಬನೇ ಈ ಹದೆಗೆಟ್ಟಿರುವ ರಸ್ತೆಯಲ್ಲಿ ಉರುಳುಸೇವೆ ಮಾಡಿದ್ದೇನೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ರಸ್ತೆ ನಿರ್ಮಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರು ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರಸ್ತೆಯಲ್ಲಿ ತಗ್ಗು ಗುಂಡಿಗಳಿಂದಾಗಿ ವಾಹನ ಹಾಗೂ ಜನರ ಸಂಚಾರ ಸೇರಿದಂತೆ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಿಗೆ ತುಂಬಾ ತೊಂದರೆಯಾಗಿದೆ. ಮಳೆ ಬಂದಾಗ ತಗ್ಗುಗಳು ಕಾಣುವುದಿಲ್ಲ. ಇದರಿಂದ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆಯಾಗಿದೆ.

    ಗುಲಾಬ್ ಟಾಕೀಸ್‌ನಿಂದ ಹರದೊಳ್ಳಿ ರಸ್ತೆಯನ್ನು ಸರ್ವೇ ಮಾಡಿದ್ದು, ಎರಡು ಸಾರಿ ಟೆಂಡರ್ ಕರೆದರೂ ಅರ್ಜಿ ಸಲ್ಲಿಸಿಲ್ಲ. ಮತ್ತೆ ಮೂರನೇ ಬಾರಿ ಟೆಂಡರ್ ಕರೆಯಲು ಸರ್ಕಾರದಿಂದ ನಿರ್ದೇಶನ ಬರಬೇಕು. ನಿರ್ದೇಶನ ಬಂದ ಮೇಲೆ ಟೆಂಡರ್ ಕರೆಯುತ್ತೇವೆ.

    ಎನ್.ಎಸ್.ಕುಲಕರ್ಣಿ
    ಎಇಇ, ಲೋಕೋಪಯೋಗಿ ಇಲಾಖೆ, ಬಾದಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts