More

    ರಾಜನೇ ಮರಳಿ ರಾಜನಾಗುತ್ತಾನೆ..!

    ಗುಳೇದಗುಡ್ಡ: ರಾಜ ಬಲಿಷ್ಠನಾಗಿದ್ದಾನೆ. ಹೀಗಾಗಿ ಈ ಬಾರಿಯು ರಾಜನೇ ರಾಜನಾಗುವ ಯೋಗವಿದ್ದು, ರಾಜ, ಪ್ರಜೆಗಳು, ಮಂತ್ರಿ ಸೈನ್ಯ ಬಲಿಷ್ಠವಾಗಿದೆ ಎನ್ನುವ ಮತ್ತು ಈ ದೇಶದಲ್ಲಿ ಯಾವ ರಾಜನಿದ್ದಾನೋ ಅವನೇ ಮುಂದುವರಿಯುತ್ತಾನೆ ಎಂಬ ಭವಿಷ್ಯವನ್ನು ಯುಗಾದಿ ಲ ಭವಿಷ್ಯದಲ್ಲಿ ಹೇಳಲಾಯಿತು.

    ಪಟ್ಟಣದ ಬಗೀಚ್‌ನಲ್ಲಿ ಇಲ್ಯಾಳ ಮ್ಯಾಳದವರು ಪ್ರತಿ ವರ್ಷ ಯುಗಾದಿ ಹಬ್ಬದ ನಿಮಿತ್ತ ನಡೆಸಿಕೊಂಡು ಬಂದಿರುವ ಯುಗಾದಿ ಲ ಭವಿಷ್ಯದಲ್ಲಿ ಭವಿಷ್ಯ ನುಡಿದು, ದೇಶದಲ್ಲಿ ಈ ವರ್ಷ ಹೆಸರು ಬಿಳಿಜೋಳ, ಕಡಲೆ, ಗೋಧಿ ಬಂಪರ್ ಬೆಳೆ ಇದೆ. ತೊಗರಿ ಸಜ್ಜೆಗೆ ಕೀಟ ಬಾಧೆ ಕಾಡಲಿದೆ. ಅಲ್ಲದೇ ಎಳ್ಳು ಅತ್ಯುತ್ತಮವಾಗಿ ಬೆಳೆಯಲಿದ್ದು, ಗುಳೇದಗುಡ್ಡ ಖಣ, ಇಳಕಲ್ ಸೀರೆಯ ವ್ಯಾಪಾರ ವಹಿವಾಟು ಕುಂಠಿತ ಕಾಣಲಿದೆ. ಅಲ್ಲದೇ ಬಟ್ಟೆ ವ್ಯಾಪಾರದಲ್ಲಿ ಈ ಭಾರಿ ಗಣನೀಯ ಏರಿಕೆ ಕಾಣಲಿದ್ದು, ಬಟ್ಟೆ ವ್ಯಾಪಾರಿ ಶೆಟ್ಟಿಯು ವ್ಯಾಪಾರದಲ್ಲಿ ಭರಪೂರವಾಗಿ ತೊಡಗಿರುತ್ತಾನೆ. ಸಿಮೆಂಟ್, ಕಬ್ಬಿಣ, ಉಸುಕು ವ್ಯಾಪಾರ ಜೋರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    ಈ ಭಾರಿ ಭರಣಿ, ಆರಿದ್ರಾ, ಪುನರ್ವಸು, ಮಾಘ, ಹುಬ್ಬಾ, ಚಿತ್ತಿ ಮಳೆಗಳು ಸಂಪೂರ್ಣವಾಗಿದ್ದು, ರಾಜ್ಯ, ದೇಶದಲ್ಲಿ ಮಳೆರಾಯ ಕಣ್ತೆರೆಯಲಿದ್ದಾನೆ. ಜನರಿಗೆ ನೀರಿನ ಬವಣೆ ತಪ್ಪಲಿದ್ದು, ಹಳಸಂದಿ, ನವಣಿ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮವಾಗಿ ಬರಲಿವೆ ಎಂದು ಯುಗಾದಿ ಲ ಭವಿಷ್ಯದಲ್ಲಿ ಭವಿಷ್ಯ ನುಡಿಯಲಾಯಿತು.

    ಸುಮಾರು ನೂರು ವರ್ಷಗಳಿಂದ ಪಟ್ಟಣದ ಇಲಾಳ ಮ್ಯಾಳದವರು ಯುಗಾದಿ ಲ ಭವಿಷ್ಯ ಹೇಳುತ್ತ ಬಂದಿದ್ದು, ಈ ಲ ಭವಿಷ್ಯ ಕೇಳಲು ತಂಡೋಪ ತಂಡವಾಗಿ ಜನರು ಆಗಮಿಸುತ್ತಾರೆ. ಮ್ಯಾಳದ ಮಲ್ಲಿಕಾರ್ಜುನ ಗೊಬ್ಬಿ, ನಾಗಪ್ಪ ಚಿಂದಿ, ಪ್ರಶಾಂತ ರಂಜಣಗಿ, ಶಂಕರ ರಂಜಣಗಿ, ಮಲ್ಲೇಶಪ್ಪ ಶೀಪ್ರಿ, ಶಿವು ಹುಣಸಿಮರದ, ಈರಣ್ಣ ರಂಜಣಗಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts