More

    ಶಾಶ್ವತ ನ್ಯಾಯಾಲಯವಾಗದಿದ್ದರೆ ಹೋರಾಟ ಅನಿವಾರ್ಯ

    ಗುಳೇದಗುಡ್ಡ, ವಕೀಲರ ಸಂಘ, ನ್ಯಾಯಾಲಯ, ಪ್ರತಿಭಟನೆ, Guledagudda, Bar Association, Court, Protest,
    ಗುಳೇದಗುಡ್ಡ: ಪಟ್ಟಣದಲ್ಲಿ ಸಂಚಾರಿ ನ್ಯಾಯಾಲಯ ಸ್ಥಾಪನೆಯಾಗಿ ಹತ್ತು ವರ್ಷ ಗತಿಸಿದರೂ ಇನ್ನೂ ಶಾಶ್ವತ ನ್ಯಾಯಾಲಯ ಸ್ಥಾಪನೆಯಾಗಿಲ್ಲ. ಸರ್ಕಾರ ಶಾಶ್ವತ ನ್ಯಾಯಾಲಯ ಸ್ಥಾಪಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗುಳೇದಗುಡ್ಡ ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ಬರಹಾನಪೂರ ಎಚ್ಚರಿಸಿದರು.

    ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಸಂಚಾರಿ ನ್ಯಾಯಾಲಯ ಪುರಸಭೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿಯೂ ಸಾಕಷ್ಟು ಅವ್ಯವಸ್ಥೆ ಇದೆ. ನ್ಯಾಯಾಲಯದ ಶಾಶ್ವತ ಕಟ್ಟಡಕ್ಕೆ ಹಲವು ಬಾರಿ ಸ್ಥಳ ಪರಿಶೀಲನೆ ನಡೆದರೂ ಅದು ಅಂತಿಮವಾಗಿಲ್ಲ. ಅಲ್ಲದೇ ಸರ್ಕಾರಿ ಮಟ್ಟದಲ್ಲಿ ಶಾಶ್ವತ ನ್ಯಾಯಾಲಯಕ್ಕೆ ಅನುದಾನ ಮಂಜೂರಾಗಿಲ್ಲ. ಉಚ್ಚ ನ್ಯಾಯಾಲಯದಲ್ಲಿ ಶಾಶ್ವತ ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಸರ್ಕಾರದ ನಿರ್ಲಕ್ಷೃತನದಿಂದ ಪ್ರಕ್ರಿಯೆ ಮರೀಚಿಕೆಯಾಗಿ ಉಳಿದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ವಾರದಲ್ಲಿ ಮೂರು ದಿನ ನಡೆಯುತ್ತಿದ್ದ ಸಂಚಾರಿ ನ್ಯಾಯಾಲಯವು ಈಗ ಎರಡು ದಿನಕ್ಕೆ ಸೀಮಿತಗೊಂಡಿದೆ. ಗುಳೆದಗುಡ್ಡದಲ್ಲಿ 2000ಕ್ಕೂ ಅಧಿಕ ಪ್ರಕರಣಗಳು ಬಾಕಿ ಇದ್ದು, ಕಕ್ಷಿದಾರರಿಗೆ ಶೀಘ್ರವಾಗಿ ನ್ಯಾಯ ನಿರ್ಣಯ ಕಷ್ಟಸಾಧ್ಯವಾಗುತ್ತಿದೆ. ಅಲ್ಲದೇ ಈ ನ್ಯಾಯಾಲಯದಲ್ಲೂ ಮೂಲ ಸೌಲಭ್ಯಗಳ ಕೊರತೆಯಿದೆ. ಇದು ಹೀಗೆ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದರು.

    ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್. ರಾಯಚೂರ, ಕಾರ್ಯದರ್ಶಿ ಎಸ್.ವೈ. ಹೊಸಮನಿ, ಸಿ.ಪಿ. ಬೆಕಿನಾಳ, ಟಿ.ಎಸ್. ಬೆನಕಟ್ಟಿ, ಜಿ.ಐ. ಮೇಟಿ, ಜಿ.ಎಸ್. ರಾಂಪೂರ, ಪಿ.ಆರ್. ಬಡಿಗೇರ, ಕೆ.ಟಿ. ಪವಾರ, ಜಿ.ಬಿ. ತೋಳಮಟ್ಟಿ, ರಮೇಶ ಅಲದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts