

ರಾಣೆಬೆನ್ನೂರ: ಶಾಲೆಗೆ ರಜೆಯಿದ್ದ ಕಾರಣ ಸ್ನೇಹಿತರೊಂದಿಗೆ ತುಂಗಭದ್ರಾ ನದಿಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳಗಿರುವ ಘಟನೆ ತಾಲೂಕಿನ ಹರನಗಿರಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ.
ಇಲ್ಲಿಯ ಗೌರಿಶಂಕರ ನಗರದ ನಿವಾಸಿ ಸೋಮಶೇಖರ ಮಣ್ಣನವರ (15) ನೀರಿನಲ್ಲಿ ತೇಲಿ ಹೋಗಿರುವ ಬಾಲಕ. ಈತ ಸೇರಿದಂತೆ ಆರು ಜನ ಸ್ನೇಹಿತರು ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದರು. ನೀರಿಗೆ ಇಳಿದಾಗ ಸೋಮಶೇಖರ ಈಜು ಬಾರದೇ ತೇಲಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಸೋಮಶೇಖರ ತೇಲಿ ಹೋಗುತ್ತಿದ್ದ ಸಮಯದಲ್ಲಿ ಗಾಬರಿಗೊಂಡ ಸ್ನೇಹಿತರು ಕೂಗಾಡಿ ಅಕ್ಕಪಕ್ಕದವರನ್ನು ಕರೆದಿದ್ದಾರೆ. ಅಷ್ಟರಲ್ಲಿ ಸೋಮಶೇಖರ ಕಣ್ಣಿಗೆ ಕಾಣದಾಗಿದ್ದಾನೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸೋಮಶೇಖರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.