ಉದ್ಯೋಗ ಖಾತ್ರಿಯ ಕೂಲಿ ಹಣಕ್ಕೂ ಲಂಚ ಕೇಳುತ್ತಿದ್ದ ಬಿಲ್‌ ಕಲೆಕ್ಟರ್‌ ಅಂದರ್‌

Krishnanand-Naik
Published on

ಶಿರಸಿ:ಉದ್ಯೋಗ ಖಾತ್ರಿ ಯೋಜನೆಯ ಹಣ ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಶಿರಸಿ ಜಾನ್ಮನೆ ಗ್ರಾಪಂ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಸ್ಥಳೀಯ ದಿವಾಕರ್ ಎಂಬುವವರು ನೀಡಿದ್ದ ದೂರು ಆಧರಿಸಿ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ, ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು. ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಗ್ರಾಪಂ ಎದುರು ಹಣ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ.

ಆತ ಇನ್ನೂ ಕೆಲವು ಕಾರ್ಮಿಕರಿಂದ ಉದ್ಯೋಗ ಖಾತ್ರಿಯ ಹಣ ಪಡೆಯಲು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಕೃಷ್ಣಾನಂದ ನಾಯ್ಕನನ್ನು ಬಂಽಸಿ, ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಎರಡು ವರ್ಷದ ಹಿಂದೆ ಇದೇ ಗ್ರಾಪಂ ಪಿಡಿಒ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net