More

    ಶುರುವಾಗಲಿದೆ 100 ದಿನಗಳ ಹಬ್ಬ; ಬಿಗ್ ಬಾಸ್ ಹತ್ತನೇ ಸೀಸನ್ ಅ.8ರಿಂದ

    ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿ ಪಡೆದಿರುವ ಶೋ ‘ಬಿಗ್ ಬಾಸ್’. ಸುಮಾರು 16-18 ಜನರು 100 ದಿನಗಳ ಕಾಲ ಒಂದೇ ಮನೆಯಲ್ಲಿದ್ದು, ಪ್ರತಿ ದಿನ ವಿಭಿನ್ನ ಟಾಸ್ಕ್‌ಗಳನ್ನು ಮಾಡುತ್ತಾ, ಪ್ರತಿ ವಾರ ಒಬ್ಬೊಬ್ಬರು ಮನೆಯಿಂದ ಹೊರಬರುತ್ತಾ ಕೊನೆಯಲ್ಲಿ ಒಬ್ಬರು ವಿಜೇತರಾಗುವ ವಿಭಿನ್ನ ರಿಯಾಲಿಟಿ ಶೋ. ಇದರಲ್ಲಿ ಕೆಲವು ಸೆಲೆಬ್ರೆಟಿಗಳು, ಕೆಲವು ಉದಯೋನ್ಮುಖ ಪ್ರತಿಭೆಗಳು ಸೇರಿ ವಿಭಿನ್ನ ವ್ಯಕ್ತಿತ್ವಗಳು ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ. ಖುಷಿ, ಸಿಟ್ಟು, ಜಗಳ ಸೇರಿ ಎಲ್ಲ ಮಿಶ್ರ ಭಾವನೆಗಳು ಒಂದೇ ಮನೆಯಲ್ಲಿ ಕಾಣಬಹುದು. ಕಳೆದ ಒಂಬತ್ತು ಸೀಸನ್‌ನಿಂದ ಕಿಚ್ಚ ಸುದೀಪ್ ಇದನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದು , ಈ ಬಾರಿಯೂ ಮುಂದುವರಿಯಲಿದ್ದಾರೆ. ಈ ಬಾರಿ ವಿಶೇಷವಾಗಿ ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್‌ನಲ್ಲಿ ಮೂಡಿಬರುತ್ತಿದೆ.

    ಅ.8 ರಂದು ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಚಾಲನೆ ಪಡೆಯಲಿದ್ದು, ನಂತರ ಪ್ರತಿ ರಾತ್ರಿ 9:30ಕ್ಕೆ ಪ್ರಸಾರವಾಗಲಿದ್ದು, ಈ ಬಗ್ಗೆ, ‘ಪ್ರತಿಬಾರಿಯಂತೆ ಈ ಬಾರಿಯೂ ಹೊಸ ರೀತಿಯಲ್ಲಿ ಕಾರ್ಯಕ್ರಮದ ಸ್ವರೂಪ ಇರಲಿದೆ. ಒಬ್ಬ ಸ್ಟಾರ್ ಕಲಾವಿದ ಸತತ ಹತ್ತು ವರ್ಷಗಳ ಕಾಲ ಒಂದು ಶೋ ನಿರೂಪಣೆ ಮಾಡಿರುವ ಹೆಗ್ಗಳಿಕೆ ಕೂಡ ಇದಕ್ಕೆ ಸಲ್ಲುತ್ತದೆ. ಎಂದಿನಂತೆ ಈ ಬಾರಿಯೂ ಗೆದ್ದವರಿಗೆ 50 ಲಕ್ಷ ರೂ. ನಗದು ಬಹುಮಾನ ಇರಲಿದೆ’ ಎಂದು ಕಲರ್ಸ್ ವಾಹಿನಿಯ ಬಿಜಿನೆಸ್ ಮುಖ್ಯಸ್ಥ ಪ್ರಶಾಂತ್ ನಾಯಕ್ ಹೇಳಿಕೊಂಡರು. ಇನ್ನು ಸುದೀಪ್,‘ಈ ಶೋ ಸ್ಕ್ರಿಪ್ಟ್ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತದೆ. ಅದು ಸುಳ್ಳು. ಬೇರೆ ಬೇರೆ ರೀತಿಯ ವ್ಯಕ್ತಿತ್ವಗಳಿರುವ ಜನರು ಅಲ್ಲಿರುತ್ತಾರೆ. ಅವರ ವರ್ತನೆಗೆ ತಕ್ಕಂತೆ ಪ್ರತಿಕ್ರಿಯೆಗಳು ಬರುತ್ತವೆ’ ಎಂದು ಹೇಳಿಕೊಂಡರು.

    ಹೊಸ ಮನೆ:
    ಈ ಬಾರಿಯ ‘ಬಿಗ್ ಬಾಸ್’ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅದರಲ್ಲಿ ಮುಖ್ಯವಾಗಿ ಬೆಂಗಳೂರಿನ ಹೊರ ವಲಯದಲ್ಲಿ 12 ಸಾವಿರ ಚದರಡಿಯಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಇದು ಬೇರೆಲ್ಲ ಭಾಷೆಗಳ ‘ಬಿಗ್ ಬಾಸ್’ ಮನೆಗಳಿಗಿಂತ ದೊಡ್ಡದು ಎನ್ನಲಾಗಿದೆ.

    24 ತಾಸು ನೇರಪ್ರಸಾರ:
    ಈ ಹಿಂದೆ ವಾಹಿನಿಯಲ್ಲಿ ಮಾತ್ರ ‘ಬಿಗ್ ಬಾಸ್’ ಪ್ರಸಾರವಾಗುತ್ತಿತ್ತು. ಈ ಬಾರಿ ಹತ್ತನೇ ಸೀಸನ್ ಆಗಿರುವುದರಿಂದ ‘ಜಿಯೊ ಸಿನಿಮಾಸ್’ ಒಟಿಟಿಯಲ್ಲಿ 24 ಗಂಟೆಗಳು ಲೈವ್ ನೋಡಬಹುದು. ಜತೆಗೆ ವೀಕ್ಷಕರಿಗೆ ಸಂವಾದ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts