More

    ದೊಡ್ಮನೆ ಸೊಸೆಯನ್ನು ಅವಮಾನಿಸಿದ್ದಲ್ಲದೆ, ಅಪ್ಪು-ಕಿಚ್ಚನ ಫ್ಯಾನ್ಸ್​ ಮಧ್ಯೆ ತಂದಿಟ್ಟು ತಮಾಷೆ ನೋಡುವ ಯತ್ನ!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ನಡುವೆ ಸ್ಟಾರ್​ ವಾರ್​ ನಡೆಯುವುದು ಸಾಮಾನ್ಯ. ಆದರೆ, ಈ ಸ್ಟಾರ್​ ವಾರ್​ ತೀರ ಕೆಳಮಟ್ಟಕ್ಕೆ ಇಳಿಯಬಾರದು. ತಮ್ಮ ನೆಚ್ಚಿನ ನಟ ಗ್ರೇಟ್​ ಎಂದು ಹೇಳಿಕೊಳ್ಳಲು ಇನ್ನೊಬ್ಬ ನಟನನ್ನು ಹೀಯಾಳಿಸುವುದು ಒಳ್ಳೆಯದಲ್ಲ. ಇದನ್ನು ಸ್ವತಃ ನಟರು ಕೂಡ ಒಪ್ಪುವುದಿಲ್ಲ. ಅದರಲ್ಲೂ ಇಂದು ನಮ್ಮ ನಡುವೆ ಜೀವಂತವಾಗಿ ಇರದ ನಟನ ಹೆಸರನ್ನು ಮುಂದಿಟ್ಟುಕೊಂಡು ಸ್ಟಾರ್​ ವಾರ್​ ಮಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಅವರಂತಹ ಕೆಟ್ಟ ಮನಸ್ಸಿನ ವ್ಯಕ್ತಿ ಬೇರಾರು ಇಲ್ಲ ಎಂದರ್ಥ. ಇಂಥಾ ಕೆಟ್ಟ ಪ್ರವೃತ್ತಿಗೆ ನಮ್ಮ ಸ್ಯಾಂಡಲ್​ವುಡ್​ ಸಾಕ್ಷಿಯಾಗುತ್ತಿರುವುದು ದುರ್ದೈವದ ಸಂಗತಿಯೇ ಸರಿ.

    ಇದನ್ನೂ ಓದಿ: ವೀಣಾ ಕಾಶಪ್ಪನವರ್​​ ಮನೆಗೆ ಶಿವಾನಂದ ಪಾಟೀಲ್​ ಭೇಟಿ!

    ದೊಡ್ಮನೆ ಸೊಸೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ರನ್ನು ಅವಮಾನಿಸಿದ್ದಲ್ಲದೆ, ಟೀಕೆಗೆ ಗುರಿಯಾಗುತ್ತಿದ್ದಂತೆ ಅದರಿಂದ ತಪ್ಪಿಸಿಕೊಳ್ಳಲು ಅಪ್ಪು ಮತ್ತು ಕಿಚ್ಚನ ಫ್ಯಾನ್ಸ್​ ನಡುವೆ ತಂದಿಡುವ ಪ್ರಯತ್ನ ಸಹ ಮಾಡಿರುವುದು ಕೀಳು ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಇಂಥಾ ತಪ್ಪನ್ನು ಯಾರೇ ಮಾಡಿರಲಿ ಅಂಥವರನ್ನು ಹಿಡಿದು ಕಠಿಣ ಶಿಕ್ಷೆ ನೀಡುವ ಮೂಲಕ ಮಂದೆ ಯಾರೂ ಇಂಥಾ ತಪ್ಪನ್ನು ಮಾಡದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಬೇಕಿದೆ.

    ಅಸಲಿಗೆ ನಡೆದಿದ್ದೇನು?
    ಪವರ್​ಸ್ಟಾರ್​ ಡಾ. ಪುನೀತ್​ ರಾಜ್​ಕುಮಾರ್​ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ವಿರುದ್ಧ ಗಜಪಡೆ ಹೆಸರಿನ ಟ್ವಿಟರ್ ಖಾತೆಯೊಂದು “ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಅದನ್ನು ಬಿಟ್ಟು ಗಂಡ ಇಲ್ಲದವರನ್ನು ಕರೆದಿದ್ದಾರೆ. ಆರ್​ಸಿಬಿ ಅನ್ ಬಾಕ್ಸ್ ಇವೆಂಟ್’ಗೆ ಇವರನ್ನು ಕರೆಸಿದ್ದಕ್ಕೆ ಈಗ ಎಲ್ಲಾ ಮ್ಯಾಚ್ ಸೋಲುತ್ತಿದ್ದಾರೆ” ಎಂದು ಅವಹೇಳನಕಾರಿ ಪೋಸ್ಟ್ ಮಾಡಿತ್ತು.

    ಇದನ್ನೂ ಓದಿ: ಬೆಂಗಳೂರು ಕೇಂದ್ರಕ್ಕೆ ಯಾರು ಸಂಸದರಾಗಬೇಕು? ಜನರು ಏನಂತಾರೆ ಕೇಳಿ!

    ಈ ಪೋಸ್ಟ್​ಗೆ ಹ್ಯಾಶ್​ಟ್ಯಾಗ್​ ಯುವರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​, ಯುವ, ಡಿಬಾಸ್​, #DevilTheHero ಎಂದು ಸೇರಿಸಿ ಹಂಚಿಕೊಂಡಿದ್ದರು. ಯಾವಾಗ ಈ ಪೋಸ್ಟ್​ ವ್ಯಾಪಕ ಟೀಕೆಗೆ, ಆಕ್ರೋಶಕ್ಕೆ ಗುರಿಯಾಯಿತೋ ಆ ಕೂಡಲೇ ಎಕ್ಸ್ ಖಾತೆಯಿಂದ ಪೋಸ್ಟ್​ ಡಿಲೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಅಪ್ಪು ಅಭಿಮಾನಿಗಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ದೂರು ಕೂಡ ದಾಖಲಿಸಿದ್ದಾರೆ. ಆದರೆ, ಟ್ವೀಟ್ ವೈರಲ್ ಆದ ತಕ್ಷಣವೇ ಖಾತೆಯ ಹೆಸರು ‘ಸುದೀಪ್ ಅಭಿಮಾನಿ’ ಎಂದು ಬದಲಾಗಿರುವುದು ಇಲ್ಲಿ ಗಮನಿಸಬೇಕಾದ ವಿಷಯ.

    ಇನ್ನು ಅಪ್ಪು ಹುಡುಗರು ಅಭಿಮಾನಿ ಬಳಗ ಸಹ ಈ ಬಗ್ಗೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದೆ. ಟ್ವೀಟ್ ಮಾಡುವ ಮುನ್ನ ‘ಗಜಪಡೆ’ ಎಂದಿದ್ದ ಹೆಸರು, ಪೋಸ್ಟ್​ ವೈರಲ್ ಆಗುತ್ತಿದ್ದಂತೆ ಸುದೀಪ್ ಅಭಿಮಾನಿ ಎಂದು ಬದಲಾಯಿಸಿದೆ. ಹೀಗೆ ಮಾಡುವ ಮೂಲಕ ಸುದೀಪ್ ಹಾಗೂ ಅಪ್ಪು​ ಅಭಿಮಾನಿಗಳ ಮಧ್ಯೆ ತಂದಿಡುವ ಕೆಲಸವನ್ನು ದರ್ಶನ್​ ಫ್ಯಾನ್ಸ್ ಎಂದು ಹೇಳಿಕೊಂಡು​ ಕೆಲವು ಕಿಡಿಗೇಡಿಗಳು ಮಾಡುತ್ತಿರುವುದು ಅಕ್ಷೇಪಾರ್ಹ.

    ಇದನ್ನೂ ಓದಿ: ಐಪಿಒ ಷೇರು 76ರಿಂದ 126ಕ್ಕೆ ಏರಿತು: ಮೊದಲ ದಿನವೇ ಹೂಡಿಕೆದಾರರಿಗೆ ಲಾಭದ ಸುರಿಮಳೆ

    ಪುನೀತ್ ಫ್ಯಾನ್ಸ್ ಕೊಟ್ಟ ದೂರು ಹೀಗಿದೆ:

    ಕಳೆದ ಮಾರ್ಚ್ 19ನೇ ತಾರೀಕಿನಂದು ಬೆಂಗಳೂರಿನ ಅರ್‌ಸಿಬಿ ತಂಡದ ಜೆರ್ಸಿ ಉದ್ಘಾಟನೆ ಕಾರ್ಯಕ್ರಮಕ್ಕೆ, ಆಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಆಹಾನಿಸಿದ್ದರು. ಅದರಂತೆ ಆಶ್ವಿನಿ ಮೇಡಮ್ ಸಹ ಆ ಕಾರ್ಯಕ್ರಮದಲ್ಲಿ, ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್‌ಸಿಬಿ ತಂಡವು ಕೆಲ ಪಂದ್ಯಗಳಲ್ಲಿ, ಸೋತ ಕಾರಣ ದರ್ಶನ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ, ಗಜಪಡೆ ಎಂಬ ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪ್ರತೀತ್ ರಾಜ್ ಕುಮಾರ್ ಅವರು ಆ ಕಾರ್ಯಕ್ರಮಕ್ಕೆ ಬಂದದ್ದೆ ಆರ್‌ಸಿಬಿ ಸೋಲಿಗೆ ಕಾರಣ ಎಂದು ಮೇಡಂ ಅವರನ್ನು ಹೊಣೆ ಮಾಡಿ ಅವರನ್ನು ಕೆಟ್ಟದಾಗಿ ನಿಂದಿಸಿ ಪೋಸ್ಟ್ ಮಾಡಿರುತ್ತಾನೆ.

    ಇದಾದ ನಂತರ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ, ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾಗ ಆ ನಕಲಿ ಖಾತೆಯ ಹೆಸರನ್ನು, “ಸುದೀಪ್ ಅಭಿಮಾನಿ” ಎಂದು ಬದಲಾಯಿಸಿ ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಗಳು ಹಾಗೂ ಸುದೀಪ್ ಅವರ ಅಭಿಮಾನಿಗಳ ನಡುವೆ ಭಿನ್ನಭಿಪ್ರಾಯ ಉಂಟಾಗುವಂತೆ ಮಾಡಿ ಸಾಮಾಜಿಕ ಜಾಲತಾಣದಲಿ ಅಶಾಂತಿ ಸೃಷ್ಟಿಸಿರುತ್ತಾನೆ ಹಾಗೂ ಅಪ್ಪು ಮತ್ತು ಸುದೀಪ್ ಅವರಿಗೆ ಅವಮಾನ ಮಾಡಿರುತ್ತಾನೆ. ಈ ಘಟನೆಯಿಂದ ಕರ್ನಾಟಕದ ರಾಜವಂಶದ ಅಭಿಮಾನಿಗಳಿಗೆ ತುಂಬಾ ನೋವು ಉಂಟಾಗಿರುತ್ತದೆ. ಹಾಗಾಗಿ ಅವನನ್ನು ಶೀಘ್ರದಲ್ಲಿ ಬಂಧಿಸಿ, ಶಿಕ್ಷೆ ನೀಡಬೇಕಾಗಿ ಕೋರುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಬಗ್ಗೆ ನಟ ದರ್ಶನ್​ ಪ್ರತಿಕ್ರಿಯೆ: 

    ಅಂದಹಾಗೆ ಈ ಪೋಸ್ಟ್ ಬಗ್ಗೆ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ(ರಿ)ಕೇಂದ್ರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪುನೀತ್ ದರ್ಶನ್ ಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ. ಈ ಅವಹೇಳನಕಾರಿ ಪೋಸ್ಟ್ ಬಗ್ಗೆ ದರ್ಶನ್ ಅವರ ಗಮನಕ್ಕೂ ಬಂದಿದೆ. ಅವರು ಕರೆ ಮಾಡಿ ಮಾತನಾಡಿದರು. “ಈ ರೀತಿ ಮಾಡುವುದು ತಪ್ಪು. ಬೇರೆ ಯಾರೋ ಬೇಕಂತಲೇ ಮಾಡಿ, ನಮ್ಮ ಮೇಲೆ ಹೇಳುತ್ತಿದ್ದಾರೆ. ಇದು ಯಾರು ಮಾಡಿದ್ದಾರೋ ಗೊತ್ತಿಲ್ಲ, ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಿ ಎಂದು ದರ್ಶನ್ ತಿಳಿಸಿದ್ದಾರೆ” ಎಂದು ಹೇಳಿದರು.

    ವರ್ಷಕ್ಕೆ 4 ಲಕ್ಷ ರೂ. ಸಂಬಳ! ಹುಡುಗ ಹೇಗಿರಬೇಕು, ಈಕೆ ಕೊಟ್ಟ ಡಿಟೇಲ್ಸ್​ ನೋಡಿದ್ರೆ ಕುಸಿದು ಬಿಳೋದು ಪಕ್ಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts