More

    ಐಪಿಒ ಷೇರು ರೂ.76ರಿಂದ 126ಕ್ಕೆ ಏರಿತು: ಮೊದಲ ದಿನವೇ ಹೂಡಿಕೆದಾರರಿಗೆ ಲಾಭದ ಸುರಿಮಳೆ

    ಮುಂಬೈ: ರೇಡಿಯೋವಾಲಾ ನೆಟ್​ವರ್ಕ್​ ಲಿಮಿಟೆಡ್​ (Radiowalla Network Ltd.) ಷೇರುಗಳು ಮಾರುಕಟ್ಟೆಯಲ್ಲಿ ಸ್ಫೋಟಕ ಪಾದಾರ್ಪಣೆ ಮಾಡಿವೆ. ರೇಡಿಯೋವಾ ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ 120.15 ರೂ. ಬೆಲೆಯೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸಿವೆ. ಈ ಷೇರುಗಳು ಐಪಿಒ ಬೆಲೆಗಿಂತ ಶೇಕಡಾ 58 ಕ್ಕಿಂತ ಹೆಚ್ಚಿನ ಲಾಭದೊಂದಿಗೆ ಪಟ್ಟಿಯಾಗಿದೆ.

    ಪಟ್ಟಿ ಮಾಡಿದ ತಕ್ಷಣ, ರೇಡಿಯೋವಾಲಾ ಷೇರುಗಳು ಶೇಕಡಾ 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗಿ 126.15 ರೂ.ಗೆ ತಲುಪಿದವು. ಹೂಡಿಕೆದಾರರು ಐಪಿಒದಲ್ಲಿ ರೇಡಿಯೋವಾಲಾ ಷೇರುಗಳನ್ನು 76 ರೂ. ಬೆಲೆಗೆ ಖರೀದಿಸಿದ್ದರು. ಈ ಐಪಿಒ ಅನ್ನು ಮಾರ್ಚ್ 27 ರಂದು ತೆರೆಯಲಾಗಿತ್ತು. ಇದು ಏಪ್ರಿಲ್ 2, 2024 ರವರೆಗೆ ಬಿಡ್​ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹಿರಿಯ ಮಾರುಕಟ್ಟೆ ಹೂಡಿಕೆದಾರ ಆಶಿಶ್ ಕಚೋಲಿಯಾ ಕೂಡ ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಆಶಿಶ್ ಕಚೋಲಿಯಾ ಅವರ ಕಂಪನಿಯು 5,00,000 ಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದೆ.

    ಅನುಭವಿ ಹೂಡಿಕೆದಾರ ಆಶಿಶ್ ಕಚೋಲಿಯಾ ಅವರು ರೇಡಿಯೋವಾಲಾದ 5,48,405 ಷೇರುಗಳನ್ನು ಹೊಂದಿದ್ದಾರೆ ಅಥವಾ ಕಂಪನಿಯಲ್ಲಿ 10.60% ಪಾಲನ್ನು ಹೊಂದಿದ್ದಾರೆ. ಕಂಪನಿಯ ಪ್ರವರ್ತಕರು ಅನಿಲ್ ಶ್ರೀವತ್ಸ, ಗುರ್ಗುಣೀತ್ ಕೌರ್ ಭಾಟಿಯಾ ಮತ್ತು ಹರ್ವಿಂದರ್ಜಿತ್ ಸಿಂಗ್ ಭಾಟಿಯಾ. ಐಪಿಒಗೂ ಮುನ್ನ ಕಂಪನಿಯಲ್ಲಿ ಪ್ರವರ್ತಕರ ಪಾಲು ಶೇ. 55.80ರಷ್ಟಿದ್ದು, ಈಗ ಶೇ. 40.95ಕ್ಕೆ ಇಳಿದಿದೆ. ರೇಡಿಯೋವಾಲಾ ಐಪಿಒ ಒಟ್ಟು ಗಾತ್ರ 14.25 ಕೋಟಿ ರೂ. ಆಗಿದೆ ರೇಡಿಯೋವಾಲಾ ನೆಟ್‌ವರ್ಕ್ 2010 ರಲ್ಲಿ ಪ್ರಾರಂಭವಾಗಿದೆ.

    ರೇಡಿಯೋವಾಲಾ ನೆಟ್‌ವರ್ಕ್ ಚಂದಾದಾರಿಕೆ ಮಾದರಿಯ ಆಧಾರದ ಮೇಲೆ ಅಂಗಡಿಯಲ್ಲಿ ರೇಡಿಯೋ ಸೇವೆಗಳನ್ನು ಒದಗಿಸುತ್ತದೆ. ಇದರ ಜೊತೆಗೆ, ಕಂಪನಿಯು ಕಾರ್ಪೊರೇಟ್ ರೇಡಿಯೋ ಸೇವೆಗಳನ್ನು ಸಹ ನೀಡುತ್ತದೆ.

    ರೂ. 339ರಿಂದ 20ಕ್ಕೆ ಕುಸಿದಿದ್ದ ಷೇರು: ಈಗ ಮತ್ತೆ ಈ ಸ್ಟಾಕ್​ಗೆ ಬೇಡಿಕೆ ಕುದುರಿದ್ದೇಕೆ?

    ರಾಹುಲ್ ಗಾಂಧಿ ಹೂಡಿಕೆ ಮಾಡಿದ ಟಾಟಾ ಷೇರು ನೀವು ಖರೀದಿಸುತ್ತೀರಾ?: ಲಾಭವಾಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

    ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಶಾಕ್; ಕಾಂಗ್ರೆಸ್​ಗೆ ಮೇಲುಗೈ: ಲೋಕ ಪೋಲ್ ಸಮೀಕ್ಷೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts