More

    ರೂ. 339ರಿಂದ 20ಕ್ಕೆ ಕುಸಿದಿದ್ದ ಷೇರು: ಈಗ ಮತ್ತೆ ಈ ಸ್ಟಾಕ್​ಗೆ ಬೇಡಿಕೆ ಕುದುರಿದ್ದೇಕೆ?

    ಮುಂಬೈ: ನ್ಯಾಶನಲ್ ಅಸೆಟ್ ರೀಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (ಎನ್‌ಎಆರ್‌ಸಿಎಲ್) ಜೇಪೀ ಗ್ರೂಪ್‌ನ ಕಂಪನಿಯಾದ ಜಯಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ (ಜೆಎಎಲ್) ಸಾಲವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ NARCL ಬೈಂಡಿಂಗ್ ಬಿಡ್ ಸಲ್ಲಿಸಿದೆ. ಬ್ಯಾಂಕಿಂಗ್ ಅಧಿಕಾರಿಗಳ ಪ್ರಕಾರ NARCL ಮಂಗಳವಾರ, ಏಪ್ರಿಲ್ 2 ರಂದು ಬ್ಯಾಂಕ್‌ಗಳಿಗೆ ತನ್ನ ಪ್ರಸ್ತಾವನೆಯನ್ನು ಸಲ್ಲಿಸಿದೆ. ಅಂದಾಜು ರೂ. 10,000 ಕೋಟಿಗೆ ಜೈಪ್ರಕಾಶ್ ಅಸೋಸಿಯೇಟ್ಸ್‌ನ ಬಾಕಿ ಸಾಲವನ್ನು ಪಡೆಯಲು ಪ್ರಸ್ತಾಪಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

    ಮಾರ್ಚ್ 2024 ರ ಹೊತ್ತಿಗೆ, ಜೈಪ್ರಕಾಶ್ ಅಸೋಸಿಯೇಟ್ಸ್ ಬಡ್ಡಿ ಸೇರಿದಂತೆ ರೂ. 28870 ಕೋಟಿ ಸಾಲವನ್ನು ಹೊಂದಿತ್ತು. ಅಂದಾಜು ರೂ. 19,000 ಕೋಟಿ ಅಸಲು ಬಾಕಿ ಇದ್ದು, ಉಳಿದದ್ದು ಬಡ್ಡಿ.

    ಬ್ಯಾಂಕುಗಳು ತಮ್ಮ ಸಾಲಗಳನ್ನು ಮರು-ರಚನೆಗಾಗಿ ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್‌ನೊಂದಿಗಿನ ಯಾವುದೇ ಒಪ್ಪಂದವನ್ನು ಈ ಹಿಂದೆ ತಿರಸ್ಕರಿಸಿದ್ದವು. ರಿಸರ್ವ್ ಬ್ಯಾಂಕ್‌ನ ಸೂಚನೆಗಳ ಅಡಿಯಲ್ಲಿ, ಜೈಪ್ರಕಾಶ್ ಅಸೋಸಿಯೇಟ್ಸ್‌ನ ಲೀಡ್ ಬ್ಯಾಂಕರ್ ಐಸಿಐಸಿಐ ಬ್ಯಾಂಕ್ 2018ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ಕಂಪನಿಯ ವಿರುದ್ಧ ದಿವಾಳಿತನದ ಅರ್ಜಿಯನ್ನು ಸಲ್ಲಿಸಿದೆ. ಇದರ ನಂತರ, 2022 ರಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ನ್ಯಾಯಮಂಡಳಿಯ ಮೊರೆಹೋಯಿತು. ಆದರೆ, ಈ ಕುರಿತು ನ್ಯಾಯಾಲಯ ಇನ್ನೂ ತೀರ್ಪು ನೀಡಿಲ್ಲ.

    ಮೂಲಗಳ ಪ್ರಕಾರ, ಎನ್‌ಸಿಎಲ್‌ಟಿ ಮೂಲಕ ಜೈಪ್ರಕಾಶ್ ಅಸೋಸಿಯೇಟ್ಸ್‌ನ ಸಾಲವನ್ನು ಪರಿಹರಿಸಲು ಕೇಂದ್ರೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ, NARCL ನ ಪ್ರಸ್ತಾವನೆಯನ್ನು ಸ್ವೀಕರಿಸಲು ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್‌ನ ಅನುಮೋದನೆ ಬೇಕಾಗಬಹುದು.

    ವಾರದ ನಾಲ್ಕನೇ ವಹಿವಾಟು ದಿನವಾದ ಗುರುವಾರ ಜೈಪ್ರಕಾಶ್ ಅಸೋಸಿಯೇಟ್ಸ್ ಷೇರುಗಳ ಖರೀದಿಗೆ ಹೂಡಿಕೆದಾರರು ಮುಂದಾದರು. ವಹಿವಾಟಿನ ಅಂತ್ಯಕ್ಕೆ ಈ ಷೇರು 20.85 ರೂ. ತಲುಪಿತು. ಹಿಂದಿನ ದಿನಕ್ಕೆ ಹೋಲಿಸಿದರೆ ಇದು 4.98% ರಷ್ಟು ಏರಿಕೆಯಾಗಿದೆ. ಶುಕ್ರವಾರ ಕೂಡ ಈ ಷೇರು ಬೆಲೆ ಶೇ. 9ರಷ್ಟು ಏರಿಕೆಯಾಗಿ 22.65 ಪೈಸೆ ತಲುಪಿತು. ಈ ಷೇರು ಫೆಬ್ರವರಿ 12 ರಂದು 27.17 ರೂ.ಗೆ ತಲುಪಿತ್ತು. ಇದು ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 339.87 ಹಾಗೂ ಕನಿಷ್ಠ ಬೆಲೆ ರೂ. 1.05 ಇದೆ.

    ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಶಾಕ್; ಕಾಂಗ್ರೆಸ್​ಗೆ ಮೇಲುಗೈ: ಲೋಕ ಪೋಲ್ ಸಮೀಕ್ಷೆ ಹೇಳಿದ್ದೇನು?

    ರಾಹುಲ್ ಗಾಂಧಿ ಹೂಡಿಕೆ ಮಾಡಿದ ಟಾಟಾ ಷೇರು ನೀವು ಖರೀದಿಸುತ್ತೀರಾ?: ಲಾಭವಾಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

    ಹೆಸರಾಂತ ಟೆಲಿಕಾಂ ಕಂಪನಿ 12 ರೂಪಾಯಿಗೆ ಷೇರುಗಳನ್ನು ಮಾರಾಟ ಮಾಡುತ್ತಿರುವುದೇಕೆ? ಎಫ್​ಪಿಒ ಎಂದರೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts