More

    ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಸರ್‌ಎಂವಿ ಮೊಮ್ಮಗಳಿಗೆ ಆಹ್ವಾನ ಕೊಟ್ಟ ನಾಡೋಜ ಡಾ.ಮಹೇಶ ಜೋಷಿ

    ಮಂಡ್ಯ: ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವಂತೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಮೊಮ್ಮಗಳು ಅಮೆರಿಕಾದ ಕುಪರ್ಟಿನೋದ ಮೇಯರ್ ಶೀಲಾ ಮೋಹನ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಆಹ್ವಾನ ನೀಡಿದ್ದಾರೆ.
    ಅಮೆರಿಕಾ ಪ್ರವಾಸದಲ್ಲಿರುವ ಮಹೇಶ ಜೋಷಿ ಅವರು, ಶೀಲಾ ಮೋಹನ್‌ರನ್ನು ಮಂಗಳವಾರ ಖುದ್ದು ಭೇಟಿ ಮಾಡಿ ಸಮ್ಮೇಳನವನ್ನು ಅರ್ಥಪೂರ್ಣವಾಗಿಸಿ ವಿಶ್ವ ಕನ್ನಡಿಗರನ್ನು ಭಾಗಿಯಾಗುವಂತೆ ಮನವಿ ಮಾಡಿದ್ದಾರೆ. ಕಸಾಪ ಬೆಳೆಸಿದವರಲ್ಲಿ ಸರ್‌ಎಂವಿ ಕೂಡ ಪ್ರಮುಖರು. ಅವರ ಮೊಮ್ಮಗಳು ಅಮೆರಿಕಾದ ಪ್ರಮುಖ ಪ್ರಾಂತ್ಯಕ್ಕೆ ಮೇಯರ್ ಆಗಿರುವುದು ನಿಜಕ್ಕೂ ಸಂತೋಷದ ಸಂಗತಿ. ನಿಮ್ಮ ಭಾಗವಹಿಸುವಿಕೆಯಿಂದ ಸಾಹಿತ್ಯ ಸಮ್ಮೇಳನವು ಅರ್ಥಪೂರ್ಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶೀಲಾ ಮೋಹನ್, ಮಿರ್ಜಾ ಇಸ್ಮಾಯಿಲ್ ಮತ್ತು ತಮ್ಮ ತಾತನವರಿಗೂ ಇದ್ದ ಬಾಂಧವ್ಯವನ್ನು ನೆನಪು ಮಾಡಿಕೊಂಡು ನಾನು ಕನ್ನಡಿಗಳು ಎನ್ನುವುದೇ ಹೆಮ್ಮೆಯ ವಿಷಯ. ಅದರಲ್ಲಿಯೂ ವಿಶ್ವೇಶ್ವರಯ್ಯ ಅವರ ಮೊಮ್ಮಗಳು ಎನ್ನುವುದು ಇನ್ನಷ್ಟು ಹೆಮ್ಮೆಯ ವಿಷಯ. ಮಂಡ್ಯದ ಜನತೆಗೂ ಸರ್‌ಎಂವಿ ಅವರಿಗೂ ಭಾವನಾತ್ಮಕ ಸಂಬಂಧವಿದೆ. ಜಿಲ್ಲೆಯ ಪ್ರತಿ ಮನೆಯಲ್ಲಿಯೂ ತಮ್ಮ ಹಿರಿಯರ ಭಾವಚಿತ್ರ ಇಲ್ಲದೆ ಹೋದರೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರ ಇರುತ್ತದೆ ಎಂದು ಸ್ಮರಿಸಿದ್ದಾರೆ.
    ಇನ್ನು ಭೇಟಿ ನಂತರ ಅಮೆರಿಕಾದ ನಾರ್ತ್ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ಕನ್ನಡಿಗರನ್ನು ಸಂಘಟಿಸಿರುವ ಕನ್ನಡ ಕೂಟ ವಸಂತಾ ಬಳಗರೆ ಅವರನ್ನು ಜೋಷಿ ಭೇಟಿ ಮಾಡಿ ಕನ್ನಡಿಗರ ಸ್ಥಿತಿಗತಿಯ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಬಹುಸಂಖ್ಯಾತ ಕನ್ನಡಿಗರು ಜೋಷಿ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts