

‘ತಲೈವರ್ 170’ ಸಿನಿಮಾದ ಪ್ರಥಮ ಲುಕ್ ಬಹಿರಂಗವಾಗಿದೆ. ಬ್ಲಾಕ್ ಆ್ಯಂಡ್ ವೈಟ್ ಥೀಮ್ನಲ್ಲಿ ಈ ಪೋಸ್ಟರ್ ವಿನ್ಯಾಸಗೊಂಡಿದೆ.
ರಜನಿ ಅಭಿನಯದ 170ನೇ ಸಿನಿಮಾ ಇದಾಗಿದ್ದು, ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರ ನಿರ್ಮಿಸುತ್ತಿರುವ ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಎಕ್ಸ್(x) ಪೇಜ್ನಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಕಂಡು ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ ‘ತಲೈವರ್ 170’ (Thalaivar 170) ಎಂದು ಕರೆಯಲಾಗುತ್ತಿದೆ. ಅಮಿತಾಭ್ ಬಚ್ಚನ್ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.
ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ‘ತಲೈವರ್ 170’ ಸಿನಿಮಾ ಮೂಡಿಬರುತ್ತಿದೆ. ‘ಜೈ ಭೀಮ್’ ಸಿನಿಮಾ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಗಮನ ಸೆಳೆಯುತ್ತಿದೆ. ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಮಾತ್ರವಲ್ಲದೇ ರಾಣಾ ದಗ್ಗುಬಾಟಿ, ಫಹಾದ್ ಪಾಸಿಲ್, ಮಂಜು ವಾರಿಯರ್ ಮುಂತಾದವರು ನಟಿಸುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಈಗ ಎಲ್ಲ ಕಲಾವಿದರ ಪೋಸ್ಟರ್ಗಳು ಫಸ್ಟ್ ಲುಕ್ನಲ್ಲಿ ರಾರಾಜಿಸುತ್ತಿವೆ.