

ಹನೂರು: ತಾಲೂಕಿನ ಆದಿಜಾಂಬವರ ಬಡಾವಣೆಯ ಎ.ಜೆ. ಕಾಲನಿಯಲ್ಲಿ ಭಾನುವಾರ ತಡರಾತ್ರಿ ಬೆಂಕಿ ತಗುಲಿ ಬೈಕ್ ಸುಟ್ಟು ಹೋಗಿದೆ.
ಕಾಲನಿಯ ರವಿಕುಮಾರ್ ಎಂಬುವರು ಗಾರೆ ಕೆಲಸ ವೃತ್ತಿ ಮಾಡುತ್ತಿದ್ದು, ಎಂದಿನಂತೆ ರಾತ್ರಿ ಮನೆಯ ಮುಂಭಾಗ ಬೈಕ್ ನಿಲ್ಲಿಸಿದ್ದರು. ಆದರೆ ತಡರಾತ್ರಿ ಸುಮಾರು 1 ಗಂಟೆಯ ವೇಳೆಯಲ್ಲಿ ರವಿಕುಮಾರ್ ಮನೆಯಿಂದ ಹೊರಬಂದು ನೋಡಿದಾಗ ಶಾರ್ಟ್ ಸರ್ಕ್ಯೂಟ್ ಅಥವಾ ಆಕಸ್ಮಿಕ ಬೆಂಕಿ ತಗುಲಿಯೋ ಬೈಕ್ ಸುಟ್ಟು ಹೋಗಿದೆ.
ಈ ಸಂಬಂಧ ರವಿಕುಮಾರ್ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.