ಎಲ್ಲ ಯುಗಕ್ಕೂ ಬೇಕಾಗಿರುವುದು ಭಗವದ್ಗೀತೆ

15sdp3
Published on

ಸಿದ್ದಾಪುರ: ಪಟ್ಟಣದ ಹೊಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗೀತಾ ಜಯಂತಿ ಕಾರ್ಯಕ್ರಮ ಶನಿವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಪಂ ಸದಸ್ಯ ಗುರುರಾಜ್ ಶಾನಭಾಗ ಭಗವದ್ಗೀತೆಯು ನಮಗೆ ಕರ್ತವ್ಯ ಮಾಡಿ ಆದರೆ ಫಲಾ ಫಲಗಳ ನಿರೀಕ್ಷೆ ಬೇಡ. ಎಲ್ಲ ಯುಗಕ್ಕೆ ಬೇಕಾಗಿರುವುದು ಗೀತೆ ಎಂದು ಹೇಳಿದರು.

ರಾಜಯೋಗಿನಿ ಬೀಕೆ ವೀಣಾ ಜಿ ಮಾತನಾಡಿ ಭಗವದ್ಗೀತೆಯು ಭಕ್ತಿಯಿಂದ ಪರಮಾತ್ಮನನ್ನು ನೆನಪು ಮಾಡುವುದಕ್ಕೆ ಪ್ರೇರಣೆ ನೀಡುತ್ತದೆ. ಸರ್ವ ಧರ್ವನ್ ಪರಿತ್ಯಜ್ಯ ಎಂದು ಸಂದೇಶವನ್ನು ತಿಳಿಸಿದರು.

ಶ್ರೇಯಸ್ ಆಸ್ಪತ್ರೆಯ ವೂದ್ಯಾಧಿಕಾರಿ ಡಾ.ಕೆ]ೕಧರ ವೈದ್ಯ ಮಾತನಾಡಿ ಪಂಚತತ್ವಗಳಿಗೆ ತೊಂದರೆ ಆಗದಂತೆ ಬದುಕುವುದು ಧರ್ಮ. ನಾವು ಬದುಕ ಬೇಕು. ಬೇರೆಯವರಿಗೆ ಬದುಕಲು ಬಿಡಬೆಕು ಎಂದು ಹೇಳಿದರು.

ಮಧುಮತಿ ಹೆಗಡೆ ಧ್ಯಾನ ಗೀತೆ, ಆರತಿ ಗೀತೆಯನ್ನು ಸುವರ್ಣ ಹೆಗಡೆ, ಶಾಮಲ ಹೆಗಡೆ, ಗೀತಾ ಹೆಗಡೆ ಹಾಡಿದರು. ಕವಿತಾ ಭಟ್ಟ ವಂದಿಸಿದರು. ಬಿ.ಕೆ.ದೇವಕಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net