ಮಾಮೂಲಿಗಾಗಿ ಥಳಿಸಿದ ದುರುಳರು

Published on

ಚಿಂತಾಮಣಿ: ತಾಲೂಕಿನ ಬುರುಡಗುಂಟೆ&ಕೋನೇಪಲ್ಲಿ ಮಧ್ಯೆ ಭಾನುವಾರ ರಾತ್ರಿ ಬರುತ್ತಿದ್ದ ಟೆಂಪೋ ಚಾಲಕನನ್ನು ತಡೆದ ನಾಲ್ವರು ಖದೀಮರು, ಹಣ ನೀಡುವಂತೆ ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ಕೋನೇಪಲ್ಲಿಯ ರಾವೇಂದ್ರ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುರುಡುಗುಂಟೆಯ ಗೌತಮ್​ ಮತ್ತು ಅಪರಿಚಿತ ಮೂವರು ಕಾರಿನಲ್ಲಿ ಬಂದು ಟೆಂಪೋವನ್ನು ಅಡ್ಡಗಟ್ಟಿ ಹಣ ಕೊಡುವಂತೆ ಕೇಳಿದರು. ಹಣ ಕೊಡದ್ದಕ್ಕೆ ಕೆರಳಿ ದೊಣ್ಣೆಗಳಿಂದ ಹಲ್ಲೆ ಮಾಡಿದರು, ಮಾಮೂಲಿ 2000 ರೂ. ಕೊಡಬೇಕು, ಇಲ್ಲವೆಂದರೆ ಸಾಯಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿದರು. ಅಷ್ಟರಲ್ಲಿ ಬೈಕ್​ನಲ್ಲಿ ಬಂದವರು ಗಲಾಟೆ ಬಿಡಿಸಿ ಗಾಯಗೊಂಡಿದ್ದ ತನ್ನನ್ನು ಆಸ್ಪತ್ರೆಗೆ ದಾಖಲು ಮಾಡಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net