ಕಂಪ್ಲಿ: ನಗರದ ಪರಶುರಾಮಪ್ಪ ಚಿತ್ರಗಾರ ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್‌ನಿಂದ ಕಿನ್ನಾಳ ಕಲೆ ಕಲಾವಿದ ಪರಶುರಾಮಪ್ಪ ಚಿತ್ರಗಾರ ಅವರ 5ನೇ ಪುಣ್ಯಸ್ಮರಣೆ ನಿಮಿತ್ತ ಸೆ.1ರಂದು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದನ್ನೂ ಓದಿ:ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕನ್ನಡ ವಿವಿ ಪ್ರಾಧ್ಯಾಪಕ ಡಾ.ಚಲುವರಾಜ್ ಅಧ್ಯಕ್ಷತೆ, ಹೆಬ್ಬಾಳ್ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಜೆ.ಎನ್.ಗಣೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಶಿಲ್ಪಕಲಾವಿದ ಕೆ.ಶ್ರೀಧರ ಮೂರ್ತಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುವುದು. ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅವರು ಕಲಾವಿದ ಪರಶುರಾಮಪ್ಪ ಚಿತ್ರಗಾರರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಪುರಸಭೆ ಅಧ್ಯಕ್ಷ ಭಟ್ಟಾ ಪ್ರಸಾದ್, ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಬೆಂಗಳೂರಿನ ಸೋಮವಂಶ ಆರ್ಯ ಕ್ಷತ್ರೀಯ ಸಮಾಜದ ಮುಖಂಡ ವೆಂಕಟಸುಬ್ಬರಾಜು, ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ರೈತ ಮುಖಂಡ ಬಿ.ನಾರಾಯಣಪ್ಪ ಆಗಮಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷೆ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ ತಿಳಿಸಿದ್ದಾರೆ.