ಮೂಲ್ಕಿ: ಮೂಲ್ಕಿ ಸೀಮೆಯ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 14 ಮಂದಿ ಸಾಧಕರಿಗೆ ಅರಸು ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ಡಿ.22ರಂದು ಮೂಲ್ಕಿ ಅರಮನೆಯ ಧರ್ಮಚಾವಡಿಯಲ್ಲಿ ನಡೆಯಲಿದೆ.
ಮೂಲ್ಕಿ ಅರಮನೆ ವೆಲ್ಫೇರ್ ಹಾಗೂ ಚಾರಿಟೆಬಲ್ ಟ್ರಸ್ಟ್, ಹಳೆಯಂಗಡಿ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಅರಸು ಪ್ರಶಸ್ತಿಯನ್ನು ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ(ಸಾಧನ ಪ್ರಶಸ್ತಿ), ದಿ.ಎಚ್.ನಾರಾಯಣ ಸನಿಲ್(ಮರಣೋತ್ತರ ಪ್ರಶಸ್ತಿ), ದಿ.ಬಾಬು ಎನ್.ಶೆಟ್ಟಿ(ಮರಣೋತ್ತರ ಪ್ರಶಸ್ತಿ), ಮೀರಾಬಾಯಿ ಕೆ.(ಶೈಕ್ಷ್ಷಣಿಕ ಕ್ಷೇತ್ರ), ಎಚ್.ಶಕುಂತಳಾ ಭಟ್(ಸಾಹಿತ್ಯ ಕ್ಷೇತ್ರ), ವಾಲ್ಟರ್ ಡಿಸೋಜ(ಕೃಷಿ ಪರಿಸರ ಕ್ಷೇತ್ರ), ಡಾ.ಹಸನ್ ಮುಬಾರಕ್(ವೈದ್ಯಕೀಯ ಕ್ಷೇತ್ರ), ಸೀತಾರಾಮ್ ಕುಮಾರ್ ಕಟೀಲು(ಯಕ್ಷಗಾನ ಕ್ಷೇತ್ರ), ಶಿವಸಂಜೀವಿನಿ ಸುರಗಿರಿ(ಸಂಘ-ಸಂಸ್ಥೆಗಳ ವಿಭಾಗ), ಪರಮಾನಂದ ಸಾಲಿಯಾನ್ ಸಸಿಹಿತ್ಲು(ಸಾಹಿತ್ಯ ಕ್ಷೇತ್ರ), ಮಾಧವ ಶೆಟ್ಟಿಗಾರ್(ಸಾಮಾಜಿಕ ಕ್ಷೇತ್ರ), ಚಂದ್ರಕುಮಾರ್(ಸಾಮಾಜಿಕ ಕ್ಷೇತ್ರ), ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ಸಂಘ ಸಂಸ್ಥೆಗಳ ವಿಭಾಗ), ಕೆರೆಕಾಡು ವಿನಾಯಕ ಯಕ್ಷಗಾನ ಫೌಂಡೇಶನ್(ಯಕ್ಷಗಾನ) ಅವರಿಗೆ ನೀಡಲಾಗುತ್ತದೆ.
22ರಂದು ಮಧ್ಯಾಹ್ನ 12 ಗಂಟೆಗೆ ಅರಮನೆ ಧರ್ಮಚಾವಡಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಲೋಕಾಯುಕ್ತ, ವಿಶ್ರಾಂತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನಗೈಯಲಿರುವರು. ಅಳದಂಗಡಿ ಅರಮನೆ ತಿಮ್ಮಣ್ಣ ಅರಸ ಡಾ.ಪದ್ಮಪ್ರಸಾದ್ ಅಜಿಲರ ಉಪಸ್ಥಿತಿಯಲ್ಲಿ, ಮುಖ್ಯ ಅತಿಥಿಯಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್‌ಪಿ, ಪತ್ರಕರ್ತೆ ರಾಧಾ ಹಿರೇಗೌಡ್ರು ಭಾಗವಹಿಸಲಿದ್ದಾರೆ. ಅರಮನೆ ಟ್ರಸ್ಟಿಯಾದ ಗೌತಮ್ ಜೈನ್, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ್ ಬೆರ್ನಾರ್ಡ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಹಾಜರಿರುವರು ಎಂದು ಮೂಲ್ಕಿ ಸೀಮೆ ಅರಸ ಎಂ.ದುಗ್ಗಣ್ಣ ಸಾವಂತರು ತಿಳಿಸಿದ್ದಾರೆ.