ಹಲ್ಲೆ ನಡೆಸಿದ್ದವನಿಗೆ ನಾಲ್ಕೂವರೆ ವರ್ಷ ಜೈಲು

17sirsi4
Published on

ಶಿರಸಿ: ಕ್ಷುಲ್ಲಕ ಕಾರಣಕ್ಕೆ 2015ರಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಇಲ್ಲಿಯ ಜೆಎಂಎಫ್​ಸಿ ನ್ಯಾಯಾಲಯ ನಾಲ್ಕೂವರೆ ವರ್ಷ ಜೈಲು ಹಾಗೂ 13 ಸಾವಿರ ರೂ. ದಂಡ ವಿಧಿಸಿದೆ.

ಇಲ್ಲಿಯ ದುಂಡಶಿನಗರದ ಪ್ರೀತಂ ಡಿಸೋಜಾ ಶಿಕ್ಷೆಗೊಳಗಾದ ವ್ಯಕ್ತಿ. ನಗರದ ಸಿಪಿ. ಬಜಾರ ಮಸೀದಿ ಹತ್ತಿರ ಬೇಡರ ವೇಷ ನೋಡುತ್ತಿದ್ದ ವೇಳೆ ವಿವೇಕ ವೆಂಕಟ್ರಮಣ ಹೆಗಡೆ ಎಂಬುವವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ವಿವೇಕ ಅವರ ಮೇಲೆ ಪ್ರೀತಂ ಡಿಸೋಜಾ ಹಲ್ಲೆ ನಡೆಸಿದ್ದ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net