ಸಾಲ ಮರುಪಾವತಿಯಿಂದ ಸಂಘಕ್ಕೆ ಹೆಚ್ಚು ಲಾಭ

177c2d1a-dda1-4534-bd80-00e8f1dfde1a
Published on

 ಬನ್ನಿಕುಪ್ಪೆ: ಸಕಾಲದಲ್ಲಿ ಸಾಲ ಮರುಪಾವತಿಯಾದ ಹಿನ್ನೆಲೆಯಲ್ಲಿ ಸಹಕಾರ ಸಂಘ 3,37,000 ರೂ. ಲಾಭ ಗಳಿಸಲು ಸಾಧ್ಯವಾಯಿತು ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯರಾಮ ಹೇಳಿದರು.

ಇಲ್ಲಿನ ಕೃಷಿ ಪತ್ತಿನ ಸಹಾಕಾರ ಸಂಘದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸದಸ್ಯರ ಸಹಕಾರ ಹಾಗೂ ನಿರ್ದೇಶಕರ ಒಗ್ಗಟ್ಟಿನಿಂದ ಸಹಕಾರ ಸಂಘ ಬೆಳೆದಿದೆ ಎಂದು ಹೇಳಿದರು.

ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಸಂಘಕ್ಕೆ ಉತ್ತಮ ಸಹಕಾರ ದೊರೆತಿದ್ದು, ಮುಂದಿನ ದಿನಗಳಲ್ಲಿ ಸಹಕಾರ ಸಂಘಕ್ಕೆ ಬೇಕಾಗುವ ಸೌಲಭ್ಯಗಳನ್ನು ದೊರಕಿಸುವುದಾಗಿ ತಿಳಿಸಿದರು.

ಸಂಘದ ವಾರ್ಷಿಕ ವರದಿಯನ್ನು ಸಿಇಒ ಜಿ.ಮಂಜುನಾಥ್ ಸಭೆಯಲ್ಲಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಚೌಡನಾಯಕ, ನಿರ್ದೇಶಕರಾದ ಜ್ಯೋತಿಕುಮಾರ್, ಗೋವಿಂದೇಗೌಡ, ಚೆಲುವರಾಜು ಪಿ.ಪಿ, ಅಶೋಕ್.ವಿ, ನಾಗಯ್ಯ, ಅಣ್ಣಯ್ಯನಾಯಕ, ಈಶ್ವರಗೌಡ, ಲಲಿತಮ್ಮ, ಚಿಕ್ಕತಾಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net