ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಅರಳಿಸುವ ಯಕ್ಷಗಾನ ಕಲೆ

kota (2)
Published on

ಕೋಟ: ಇಂದಿನ ಮಕ್ಕಳು ಕಂಪ್ಯೂಟರ್ ಗೊಂಬೆಗಳಾಗಿದ್ದಾರೆ, ಸನಾತನ ಶ್ರದ್ಧೆ, ನಂಬಿಕೆ ದೂರವಾಗಿದೆ. ಅವರಲ್ಲಿ ಧಾರ್ಮಿಕ ತತ್ವಗಳನ್ನು ಬೆಳೆಸಿ ಸನಾತನ ಸಂಸ್ಕೃತಿಯನ್ನು ಉಳಿಸಬೇಕಾಗಿದೆ, ಯಕ್ಷಗಾನದ ಆಸಕ್ತಿ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಅರಳಿಸಬಲ್ಲದು ಎಂದು ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ ಕುವಾರ ಕಲ್ಕೂರ ಹೇಳಿದರು.

ಕರ್ನಾಟಕ ಯಕ್ಷಧಾಮ ಮಂಗಳೂರು, ಕೋಟ ಸಾಲಿಗ್ರಾಮ ಮಕ್ಕಳ ಮೇಳ, ಮಂಗಳೂರಿನ ಕಲ್ಕೂರ ಪ್ರತಿಷ್ಠಾನನ ಸಂಯುಕ್ತ ಆಶ್ರಯದಲ್ಲಿ ಕೋಟ ಶ್ರೀ ಹಂದೆ ಮಹಾಗಣಪತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನೆ, ಸಾಧಕ ದಂಪತಿಗೆ ಸನ್ಮಾನ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ವಾಂಸ, ಯಕ್ಷಗಾನ ಕಲಾವಿದ ಡಾ.ಎಂ.ಪ್ರಭಾಕರ ಜೋಶಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕೃಷಿಕ, ಸವಾಜ ಸೇವಕ ಕುಪ್ಪಾರು ಅನಂತ ಉಡುಪ, ಲಕ್ಷ್ಮೀ ಉಡುಪ ದಂಪತಿಯನ್ನು ಗೌರವಿಸಲಾಯಿತು.

ಸಾಲಿಗ್ರಾಮ ಮಕ್ಕಳ ಮೇಳದ ಎಚ್.ಶ್ರೀಧರ ಹಂದೆ, ರಾಮಕೃಷ್ಣ ಕೆದಿಲಾಯ, ಹಂದೆ ದೇವಳದ ಆಡಳಿತ ಮೊಕ್ತೇಸರ ಎಚ್.ಅಮರ ಹಂದೆ, ಮಹಾಬಲೇಶ್ವರ ಕೆದಿಲಾಯ, ಕಾವ್ಯ ಹಂದೆ, ರುಪ್ರಸಾದ ಕೆದಿಲಾಯ ಉಪಸ್ಥಿತರಿದ್ದರು.

ಡಾ.ಜಿ.ವೈಕಂಠ ಹೇರ್ಳೆ ಸನ್ಮಾನಿತರನ್ನು ಪರಿಚಯಿಸಿದರು. ಕರ್ನಾಟಕ ಯಕ್ಷಧಾಮದ ಎಚ್.ಜನಾರ್ದನ ಹಂದೆ ವಂದಿಸಿದರು. ಎಚ್.ಸುಜಯೀಂದ್ರ ಹಂದೆ ನಿರೂಪಿಸಿದರು. ವಿನಿತಾ ಹಂದೆ, ರಶ್ಮಿ ಪ್ರಸಾದ್, ಅಶೋಕ್ ಉಡುಪ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net