ಶ್ರೀಕೃಷ್ಣನ ಆದರ್ಶ, ಜೀವನ ಇಂದಿಗೂ ಪ್ರಸ್ತುತ

byn
Published on

ಬೈಂದೂರು: ಧರ್ಮ ಸಂಸ್ಥಾಪಕ, ಮಕ್ಕಳ ಹಕ್ಕುಗಳ ಪ್ರತಿಪಾದಕ, ಮಹಿಳಾ ವಿಮೋಚನಾಕಾರ, ಶ್ರೇಷ್ಠ ಮನಶಾಸ್ತ್ರಜ್ಞ, ರಾಜನೀತಿಜ್ಞ, ದುಷ್ಟರ ದಮನ-ಶಿಷ್ಟರ ರಕ್ಷಣೆಗಾಗಿ ಭೂಭಾರ ಕಡಿಮೆ ಮಾಡಲು ಹತ್ತು ಅವತಾರ ಎತ್ತಿದ ಶ್ರೀಕೃಷ್ಣನ ಆದರ್ಶ ಹಾಗೂ ಜೀವನ ಇಂದಿಗೂ ಪ್ರಸ್ತುತ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉುಪಿ ಜಿಲ್ಲಾ ಕಾರ್ಯವಾಹ ಪ್ರಶಾಂತ್ ಹೇಳಿದರು.

ಬೈಂದೂರು ಸೇವಾ ಸಂಗಮ ಶಿಶು ಮಂದಿರದ ಆಶ್ರಯದಲ್ಲಿ ನಡೆದ ಸೇವಾ ಸಂಗಮದ ಮಕ್ಕಳ 41ನೇ ವಷರ್ದ ಶ್ರೀಕೃಷ್ಣ-ರಾಧೆಯರ ಬಾಲ ಲೀಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಶುಮಂದಿರಗಳ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ನೀಡುವುದರಿಂದ ಬಾಲ್ಯದಿಂದಲೇ ಧರ್ಮ ಜಾಗೃತಿಯಿಂದ ಮುಂದೆ ಸತ್ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ ಮಾತನಾಡಿ, ನಾಲ್ಕು ದಶಕಗಳನ್ನು ಪೂರೈಸಿ ಐದನೇ ದಶಕದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆಯ ಕಾರ್ಯವೈಖರಿ ಮತ್ತು ಪಾಲಕರ ಪ್ರೋತ್ಸಾಹ ಹಾಗೂ ಊರಿನ ಸಮಸ್ತ ಜನತೆಯ ಸಹಕಾರವನ್ನು ಸ್ಮರಿಸಿದರು.

ಕಾರ್ಯದರ್ಶಿ ರಾಜೇಶ್ ಐತಾಳ್, ವ್ಯವಸ್ಥಾಪಕ ದಿನೇಶ್, ಉಪಾಧ್ಯಕ್ಷ ರವೀಂದ್ರ ಶಾನುಭಾಗ್ ಉಪಸ್ಥಿರಿದ್ದರು. ಸದಸ್ಯೆ ಆಶಾ ದಿನೇಶ್ ಸ್ವಾಗತಿಸಿದರು. ನಿರ್ಮಲಾ ರವಿಂದ್ರ ಕಿಣಿ ವಂದಿಸಿದರು. ಉಪಾಧ್ಯಕ್ಷ ಸುಧಾಕರ ಪಿ.ಬೈಂದೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net