ದೇವಿಗೆ ಉಡಿ ತುಂಬುವ ಕಾರ್ಯ

The act of worshiping the goddess
ಗುಳೇದಗುಡ್ಡದಲ್ಲಿ ಆಷಾಢ ಮಾಸದ ಪ್ರಯುಕ್ತ ಗೊಂಧಳಿ ಸಮಾಜದಿಂದ ಅಂಬಾಭವಾನಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ನಾರಾಯಣ ಶಿಂಧೆ, ಮಾತಾರೆಪ್ಪ ಪಾಚಂಗಿ, ಅರವಿಂದ ಗೊಂಧಳೆ, ಜಮುನಾ ಸಿಂಗದ ಇತರರಿದ್ದರು.
Published on

ಗುಳೇದಗುಡ್ಡ: ಪಟ್ಟಣದ ಗೊಂಧಳಿ ಸಮಾಜದ ಆಶ್ರಯದಲ್ಲಿ ಆಷಾಢ ಮಾಸದ ನಿಮಿತ್ತ ಅಂಬಾಭವಾನಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಪಟ್ಟಣದ ಗ್ರಾಮದೇವತೆ ಮೂಕೇಶ್ವರಿ, ದ್ಯಾಮವ್ವ, ದುರ್ಗಮ್ಮ, ಬನಶಂಕರಿ, ಅಂಬರಗೊಳ ದುರ್ಗಮ್ಮ ದೇವಸ್ಥಾನಗಳಿಗೆ ಸಮಾಜದ ಮಹಿಳೆಯರು ಬೆಳಗ್ಗೆ ಹೋಗಿ ಉಡಿ ತುಂಬಿ ನೈವೇದ್ಯ ಅರ್ಪಿಸಿದರು. ನಂತರ ಬಾಗವಾನ ಪೇಟೆಯ ಅಂಬಾಭವಾನಿ ದೇವಸ್ಥಾನಕ್ಕೆ ಬಂದು ದೇವಿಗೆ ಅಭಿಷೇಕ, ಉಡಿ ತುಂಬಿ ಪೂಜೆ ನೆರವೇರಿಸಿದರು.

ಗುಳೇದಗುಡ್ಡ ವಾಡಿಯ ಗಜೇಂದ್ರಗಡ, ಅಮೀನಗಡ, ಬಾಗಲಕೋಟೆ, ನರಗುಂದ, ಕೊಪ್ಪಳ ಇತರ ಕಡೆಗಳಿಂದ ಸಮಾಜದ ಹಿರಿಯರು ಬಂದು ದೇವಿಗೆ ಉಡಿ ತುಂಬಿದರು. ಭಕ್ತರಿಗೆ ಅನ್ನ ಪ್ರಸಾದ ನಡೆಯಿತು.

ಸಮಾಜದ ಮುಖ್ಯಸ್ಥರಾದ ನಾರಾಯಣ ಶಿಂಧೆ, ಹಿರಿಯರಾದ ಶಾಂತವೀರ ಶಿಂಧೆ, ಮಾತಾರೆಪ್ಪ ಪಾಚಂಗಿ, ಡಾ.ಸಿ.ಎಂ. ಜೋಶಿ, ಗಂಗಾರಾಮ ಸುಗತೆ, ಅರವಿಂದ ಗೊಂಧಳೆ, ಸುಭಾಸ ಶಿಂಧೆ, ಅರುಣ ಶಿಂಧೆ, ಕೆಂಚಪ್ಪ ಇಂಗಳೆ, ಲಕ್ಷ್ಮಣ ಚವ್ಹಾಣ, ಸುರೇಶ ಭಾಟ್, ಜಮುನಾ ಸಿಂಗದ, ಪ್ರಕಾಶ ಜೋಶಿ, ಆದಿಶಕ್ತಿ ದುರ್ಗಾದೇವಿ ಗೊಂಧಳಿ ಸಮಾಜ ಸಂಘದ ಅಧ್ಯಕ್ಷ ವಿನಾಯಕ ಶಿಂಧೆ, ರವಿ ಪಾಚಂಗಿ, ಅಭಿಷೇಕ ಗೊಂಧಳೆ, ಆನಂದ ಪಾಚಂಗಿ, ಗಿರೀಶ ಪಾಚಂಗಿ, ಬಸವರಾಜ ಚವ್ಹಾಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net