ಬೈಕ್ ಕದ್ದಿದ್ದ ಆರೋಪಿ ಬಂಧನ

Crime Logo
Published on

ಶಿರಸಿ: ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಹುಬ್ಬಳ್ಳಿಯ ಪ್ರಜ್ವಲ್ ಕಿರಣ ಮಂಡಲಕರ್ ಬಂಧಿತ ಆರೋಪಿ.

ಈತ ನಗರಸಭೆ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಬಸಪ್ಪ ಶಿವಪ್ಪ ದೇವರಿಯವರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ನಗರ ಠಾಣೆ ಪೊಲೀಸರು ಆರೋಪಿ ಜತೆ ಕಳ್ಳತನವಾದ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿರಸಿ ಡಿವೈಎಸ್ಪಿ ಗಣೇಶ ಕೆಎಲ್ ಮಾರ್ಗದರ್ಶನದಲ್ಲಿ ಸಿಪಿಐ ಶಶಿಕಾಂತ ವರ್ವ ನೇತೃತ್ವದಲ್ಲಿ ನಗರಠಾಣೆ ಪಿಎಸ್​ಐಗಳಾದ ನಾಗಪ್ಪ, ಮಹಾಂತೇಶ ಕುಂಬಾರ ಸಿಬ್ಬಂದಿ ನಾರಾಯಣ ರಾಠೋಡ , ವಿಶ್ವನಾಥ ಭಂಡಾರಿ, ಮಧುಕರ, ನಾಗಪ್ಪ ಲಮಾಣಿ, ಸದ್ದಾಂಹುಸೇನ್, ಮಲ್ಲಿಕಾರ್ಜುನ, ಮಂಜುನಾಥ,ನಜೀರ್ ಪಿಂಜಾರ್, ಉಮೇಶ ಪೂಜಾರಿ, ಉದಯ ಗುನಗಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net