

ಮಾಗಡಿ: ಪಟ್ಟಣದ ಅರಳೇಪೇಟೆ ಕ್ರಾಸ್‌ನ ಮನೆಯಲ್ಲಿ ಸುಮಾರು 100 ಗ್ರಾಂ ಚಿನ್ನದ ಗಟ್ಟಿ ಕಳವು ಪ್ರಕರಣದ ಆರೋಪಿಯನ್ನು ಬುಧವಾರ ಪತ್ತೆಮಾಡುವಲ್ಲಿ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮುಳುನಾಡಿನ ತಿರುಣಾಮಲೈ ದೇವಿ (28) ಬಂಧಿತ ಆರೋಪಿ. ತಮುಳುನಾಡಿನ ತಿರುಣಾಮಲೈ ಮೂಲದವರಾಗಿದ್ದಾರೆ. ಡಿ.24 ರಂದು ಚಿನ್ನದ ಗಟ್ಟಿಯನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿ ದೇವಿಯನ್ನು ಫೆ.26 ರಂದು ತಮುಳುನಾಡಿನ ತಿರುಣಾಮಲೈನಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕಳವು ಮಾಡಿದ ಚಿನ್ನದ ಗಟ್ಟಿಯಿಂದ ಒಡವೆಗಳನ್ನು ಮಾಡಸಿಕೊಂಡಿರುವುದಾಗಿ ತಿಳಿಸಿದ್ದಾಳೆ.
ಸುಮಾರು 7ಲಕ್ಷ ರೂ. ಮೌಲ್ಯದ ಒಟ್ಟು 101 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.