

ಕುಮಟಾ: ಗ್ರಾಹಕರಿಗೆ ಅನನ್ಯವಾದ ಸೇವೆಯಿಂದ ಎಲ್ಲೆಡೆ ವಿಶ್ವಾಸಮಾನ್ಯತೆ ಗಳಿಸಿರುವ ಜಿಲ್ಲೆಯ ಗ್ರಹೋಪಕರಣ ಹಾಗೂ ಪೀಠೋಪಕರಣಗಳ ಬೃಹತ್ ಮಳಿಗೆಯಾಗಿರುವ ಇಲ್ಲಿನ ತರಂಗ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಸಂಸ್ಥೆಯ ಹೊನ್ನಾವರದ ಶಾಖಾ ಮಳಿಗೆಯು ನೂತನ ವಿಶಾಲ, ಸುಸಜ್ಜಿತ ಮಳಿಗೆಗೆ ಗುರುವಾರ ವಿಧ್ಯುಕ್ತವಾಗಿ ಸ್ಥಳಾಂತರಗೊಂಡಿತು.
ಹೊನ್ನಾವರ ಪಟ್ಟಣದ ಬ್ಯಾಂಕ್‌ರಸ್ತೆಯ ವಿನಾಯಕ ಛೇಂಬರ್ಸ ಕಟ್ಟಡದಲ್ಲಿ ತರಂಗ ಇಲೆಕ್ಟ್ರಾನಿಕ್ಸ್ ಬೃಹತ್ ಶೋರೂಂ ಶುಭಾರಂಭಗೊಂಡಿದ್ದು, ಬೆಂಗಳೂರಿನಲ್ಲಿರುವ ನಿವೃತ್ತ ಇಂಜಿನಿಯರ್ ಕಾಮೇಶ್ವರ ಟಿ. ಭಟ್ಟ ತುಂಬ್ಲೇಮಠ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಇಷ್ಟು ವರ್ಷಗಳ ಕಾಲ ತರಂಗ ಇಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ಅತ್ಯಂತ ಉತ್ತಮವಾಗಿ ನಡೆಸಿಕೊಂಡು ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ಒದಗಿಸಿದಂತೆಯೇ ಮುಂಬರುವ ದಿನಗಳಲ್ಲಿಯೂ ಅದೇ ರೀತಿಯ ಸೇವೆ ಸಲ್ಲಿಸುವಂತಾಗಲಿ. ಸಂಸ್ಥೆಯು ಇನ್ನಷ್ಟು ಬೆಳೆದು ಇನ್ನೂ ಹೆಚ್ಚಿನ ಮಳಿಗೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ಅತಿಥಿಗಳಾಗಿ ಉದ್ಯಮಿ ಜಗದೀಶ ಟಿ. ಪೈ, ಉದ್ಯಮಿ ರಾಜೇಶ ವಿ. ಸಾಳೇಹಿತ್ತಲ, ಉದ್ಯಮಿ ಮಂಜುನಾಥ ಶೇಟ ಪಾಲ್ಗೊಂಡು ಶುಭ ಹಾರೈಸಿದರು. ತರಂಗ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿರ‍್ಸ ಸಂಸ್ಥೆಯ ಜಯಶ್ರೀ ಭಟ್ಟ, ವಸಂತ ಭಟ್ಟ, ಜಯಂತ ಭಟ್ಟ ಹಾಗೂ ಕುಟುಂಬದವರು, ಹಿತೈಶಿಗಳು, ಗ್ರಾಹಕರು, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.